ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರೊಂದಿಗೆ ಚರ್ಚಿಸಿ, ತಾಲೂಕಿನ ಗೊರೇಬಾಳ ಮತ್ತು ಚನ್ನಳ್ಳಿ ಗ್ರಾಮಗಳ ಮಧ್ಯೆ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಫೆ.26 ಗುರುವಾರದಂದು ಒಳಬಳ್ಳಾರಿ ಪರಮಪೂಜ್ಯ ಶ್ರೀಗಳ ನೇತೃತ್ವದಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಈ ಕಾರ್ಯ ಆದೇಶದೊಂದಿಗೆ ಅನುದಾನ ರೂ 3 ಕೋಟಿ 23 ಲಕ್ಷ 52 ಸಾವಿರಕ್ಕೂ ಹೆಚ್ಚಿನ ಅನುದಾನದ ವೆಚ್ಚದಲ್ಲಿ ಅಡಿಗಲ್ಲು\ಗುದ್ದಲಿ ಪೂಜೆ ಕಾರ್ಯ ನೆರವೇರಿಸಲಾಯಿತು.
ಈ ವೇಳೆ: ಗೊರೇಬಾಳ ಗ್ರಾಮದ ಮುಖಂಡರಾದ ದೊಡ್ಡಭೀಮನಗೌಡ, ಸಣ್ಣಭೀಮನಗೌಡ, ಎಂ ರಂಗನಗೌಡ, ವೆಂಕಟೇಶ ರಾಗಲಪರ್ವಿ, ಹೊನ್ನನಗೌಡ ಬೆಳಗುರ್ಕಿ, ಅಮರೇಶಗೌಡ, ಸಿದ್ದನಗೌಡ ನೆಟೆಕಲ್, ಹನುಮಂತಪ್ಪ, ಷಣ್ಮುಖಗೌಡ, ಶರಣೇಗೌಡ, ಹಾಗೂ ಸಿದ್ದಲಿಂಗೇಶ, ಮಹೇಶ ಸೇರಿದಂತೆ ಗ್ರಾಮಸ್ಥರು ಇದ್ದರು.

