ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಆರಾಧ್ಯ ದೈವ ಶ್ರೀ ಭದ್ರಕಾಳಿ
ಶ್ರೀ ವೀರಭದ್ರೇಶ್ವರ ರಥೋತ್ಸವವು ನ.30 ರಂದು ಅದ್ದೂರಿಯಾಗಿ ಜರುಗಲಿದೆ.
ಶ್ರೀ ವೀರಭದ್ರೇಶ್ವರ ಜಾತ್ರೆಯ ದಿನ ಬೆಳ್ಳಿಗೆ 5 ಗಂಟೆಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರನಿಗೆ ಮಹಾರುದ್ರಭಿಷೇಕ ಪೂಜೆ, ಹಾಗೂ ಸಹಸ್ರ ಬಿಲ್ವಾರ್ಚನೆ, ಮಹಾಮಂಗಳರತಿ ಜರುಗಲಿವೆ. ಬೆಳ್ಳಿಗೆ 9 ಗಂಟೆಗೆ ಗೋಪುರಕ್ಕೆ ಮತ್ತು ರಥೋತ್ಸವಕ್ಕೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ಜರುಗಲಿವೆ. ಸಾಯಂಕಾಲ 3 ಗಂಟೆಗೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ನಂದಿ ದ್ವಜದೂಡನೆ ಕಳಸ ಸಮೂಹದೊಂದಿಗೆ ಹೊರಡಿಸುವುದರ ಮೂಲಕ ಸಾಯಂಕಾಲ 5 ಗಂಟೆಗೆ ವೀರಭದ್ರರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನಂತರ ಸಾಯಂಕಾಲ 7 ಗಂಟೆಗೆ ಅಗ್ನಿಕುಂಡ ಪ್ರವೇಶ ಮಹೋತ್ಸವ ಜರುಗಲಿದೆ.
ಯಮನೂರು ಗ್ರಾಮದ ಬಸವೇಶ್ವರ ಸಂಘದ ಶ್ರೀ ರುದ್ರಮುನಿಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿ ಇವರಿಂದ ಪುರವಂತಿಕೆ ಮತ್ತು ಅಮರಪ್ಪ ಹೂಗಾರ ಸಂಗಡಿರಿಂದ ಶಹನಾಯಿ ಕಾರ್ಯಕ್ರಮ ಜರುಗಲಿದ್ದು ಸಕಲ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಡಿ.1 ರಂದು ರಂದು ವೀರಭದ್ರೇಶ್ವರ ಜಾತ್ರೆಯ ಎರಡನೇ ದಿನ ಸಾಯಂಕಾಲ 5 ಗಂಟೆಗೆ ನಂದಿಕೋಲು ಪುರವಂತಿಕೆ ಸೇವೆ, ಹಾಗೂ ಕಡುಬಿನ ಕಾಳಗ ನಡೆಯಲಿದೆ. ಜಾತ್ರೆಯ ವಿಶೇಷತೆ ಅಂಗವಾಗಿ ನ. 27 ಗುರುವಾರದಂದು ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ 4 ನೇ ವರ್ಷದ ಕಲ್ಯಾಣೋತ್ಸವ ಹಾಗೂ ಮಹಾದ್ವಾರ ಲೋಕಾರ್ಪಣೆ ಜರುಗಲಿದೆ. ಅದರಿಂದ
ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಭದ್ರಕಾಳಿ, ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬಸವೇಶ್ವರ ಯುವಕ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

