ರಾಯಚೂರು ಫೆಬ್ರವರಿ 26 (ಕರ್ನಾಟಕ ವಾರ್ತೆ): ಸರಕಾರಿ ನೌಕರರು ಒತ್ತಡದ ಮಧ್ಯೆಯು ಉತ್ಸಾಹದಿಂದ ಕೆಲಸ ಮಾಡುವ ಪ್ರವೃತ್ತಿಯನ್ನು ಮೈಗೊಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ಹೇಳಿದರು.
ನಗರದ ಕೃಷಿ ವಿವಿಯ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ 2025-26ನೇ ಸಾಲಿನ ನೌಕರರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯಲ್ಲಿರುವ ನಿಮ್ಮ ಉತ್ಸಾಹ ಕೆಲಸದಲ್ಲಿಯು ತೊಡಗಿಸಿಕೊಳ್ಳಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿ ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕವಾಗಿ ಆರೋಗ್ಯವನ್ನು ಸದೃಢರನ್ನಾಗಿಸಿಕೊಳ್ಳಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಕಳೆದ ಎರಡು ದಿನಗಳ ಕಾಲ ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗಿದೆ ಎಂದರು. ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಿ ಯಶಸ್ವಿಗೆ ಶ್ರಮಿಸಿದ ಜಿ.ಪಂ ಅಧಿಕಾರಿಗಳಿಗೆ ಹಾಗೂ ವಿವಿಧ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ಕೃಷಿ ವಿವಿಯ ಜಗಜ್ಯೋತಿ ಶ್ರೀ ಬಸವೇಶ್ವರ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ರಂಜಿಸಿದ್ದವು.
ಜಿ.ಪಂ ತಂಡದ ವಿಜೇತರ ಪಟ್ಟಿ: 200 ಹಾಗೂ 400 ಮೀ ಓಟದಲ್ಲಿ ಕು.ಅಕ್ಷಿತಾ ಇವರು ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗ ಶಟಲ್ ಬ್ಯಾಡ್ಮೆಂಟನ್ ಹಾಗೂ ಟೇಬಲ್ ಟೆನಿಸ್ಸ್ ಅಲ್ಲಿ ಮಾನಸಾ, ರಂಜಿತಾ, ಕು.ಕಲ್ಪನಾ ಇವರು ಪ್ರಥಮ ಪಡೆದರು.
ಪುರುಷರು ವಿಭಾಗ ಶಟಲ್ ಬ್ಯಾಡ್ಮೆಂಟನ್ ನಲ್ಲಿ ಸತೀಶ್, ರಾಘವೇಂದ್ರ ಕುಲಕರ್ಣಿ, ವೇಣುಗೋಪಾಲ್ ವರಪ್, ಬಸವೇಶ್ವರ, ಸಲಿಮಾಲೀಕ್ ಇವರು ಪ್ರಥಮ ಸ್ಥಾನ ಪಡೆದರು.
ನರಸರೆಡ್ಡಿ ಇವರು ಪುರುಷರು 200 ಮೀ ಓಟ, ಶಾಟ್ ಪುಟ್, ಉದ್ದ ಜಿಗಿತದಲ್ಲಿ ಪ್ರಥಮ ಪಡೆದರು. ನಿಂಗಪ್ಪ ಇವರು ಬರ್ಚಿ ಎಸೆತದಲ್ಲಿ ಪ್ರಥಮ ಹಾಗೂ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು.
ಮಹಿಳೆಯರ ಚೆಸ್ಸ್ ಅಲ್ಲಿ ಉರುಕುಂದಮ್ಮ ದ್ವಿತೀಯ ಸ್ಥಾನ ಹಾಗೂ ಪುರುಷರು ಚೆಸ್ಸ್ ಅಲ್ಲಿ ಬಸವೇಶ್ವರ ಪ್ರಥಮ ಸ್ಥಾನ ಪಡೆದರು.
ಗುಂಪು ಕ್ರೀಡೆಗಳಾದ ಮಹಿಳೆಯರ ಥ್ರೋಬಾಲ್ ನಲ್ಲಿ ಮಾನಸಾ ಹಾಗೂ ತಂಡ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಕು.ಪೂಜಾ ಹಾಗೂ ತಂಡ ಪ್ರಥಮ ಸ್ಥಾನ ಪಡೆದರು.
ಮಾನ್ವಿ ಮತ್ತು ರಾಯಚೂರು ಜಿಲ್ಲಾ ಪಂಚಾಯತ ತಂಡಗಳ ನಡುವೆ ನಡೆದ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಮಾನ್ವಿ ತಂಡ ಗೆದ್ದು ಜಿಲ್ಲಾ ಪಂಚಾಯತ್ ರನ್ನರ್ ಆಪ್ ಪ್ರಶಸ್ತಿ ಪಡೆದುಕೊಂಡಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕರು ಶರಣಬಸವರಾಜ ಕೆ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *