ಶಂಕರ ಟ್ರಸ್ಟ್ ಕಾಲೇಜಿನ ಎಂ. ಎಸ್. ಡಬ್ಲ್ಯೂ.ವಿದ್ಯಾರ್ಥಿಗಳಿಂದ ಕಾರುಣ್ಯಾಶ್ರಮದಲ್ಲಿ ಸೇವಾ ತರಬೇತಿ ಕಾರ್ಯಗಾರ

ಸಿಂಧನೂರು – ಫೆ 25 ಶಂಕರ ಟ್ರಸ್ಟ್ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯ ಸಿಂಧನೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಂ. ಎಸ್. ಡಬ್ಲ್ಯೂ ಪ್ರಥಮ ಹಂತದ ವಿದ್ಯಾರ್ಥಿಗಳು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಾಮಾಜಿಕ ಸೇವೆಯ ಹಲವಾರು ಅಂಶಗಳ ಮೂಲಕ ಸಂವಾದ ನಡೆಸಿ ಸೇವಾ ತರಬೇತಿ ಕಾರ್ಯಗಾರದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡು ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಎಂ.ಎಸ್‌.ಡಬ್ಲ್ಯೂ.ಪದವಿ ಸ್ವೀಕರಿಸಿದ ನಂತರ ಕಾರುಣ್ಯಾಶ್ರಮದ ಸೇವೆಯಲ್ಲಿ ತಾವುಗಳು ಕೂಡ ಭಾಗಿಯಾಗುತ್ತೇವೆಂದು ಅನಿಸಿಕೆಗಳ ಮೂಲಕ ಭರವಸೆ ನೀಡಿದರು. ಈ ಸಮಯದಲ್ಲಿ ಶಂಕರ್ ಟ್ರಸ್ಟ್ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಏಕ್ಷಾವಲಿ ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿದರು. ಈ ಕಾರ್ಯಗಾರದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ತಾವುಗಳು ಪಡೆಯುವ ಶಿಕ್ಷಣ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸುವಂತಹ ಒಂದು ಹಂತದ ಶಿಕ್ಷಣ ಎಂ. ಎಸ್. ಡಬ್ಲ್ಯೂ. ಪದವಿ ವಿದ್ಯಾರ್ಥಿಗಳಿಂದ ಇಂದು ನಮ್ಮ ರಾಜ್ಯದಲ್ಲಿ ಅನೇಕ ಸಮಾಜ ಪರ ಕಾರ್ಯಗಳು ಜರುಗುತ್ತಿವೆ. ಈ ಕಾರುಣ್ಯ ಕುಟುಂಬದ ಕತ್ತಲೆಯ ಬದುಕಿಗೆ ಬೆಳಕು ಕೊಡುವಂತಹ ವಿದ್ಯಾರ್ಥಿಗಳು ತಾವುಗಳಾಗಬೇಕು. ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ವಿರುದ್ಧವಾದ ವೃದ್ಧಾಶ್ರಮಗಳನ್ನು ಕನಸಲು ಯಾರು ಕಲ್ಪನೆ ಮಾಡಿಕೊಳ್ಳುವ ಹಾಗೆ ತಾವುಗಳು ಮಾಡಬೇಕು. ಈ ನಮ್ಮ ಕಾರುಣ್ಯ ಸಂಸ್ಥೆಯು ಎಂಟು ವರ್ಷಗಳ ಹಿಂದೆ ಅನಿವಾರ್ಯಕ್ಕಾಗಿ ನಿಜವಾದ ಅನಾಥರ ಬದುಕಿಗಾಗಿ ಹುಟ್ಟಿದೆಯ ಹೊರತು ಇದರಲ್ಲಿ ಯಾವ ಸ್ವಾರ್ಥತೆಯು ಇರುವುದಿಲ್ಲ. ಈ ಕಾರುಣ್ಯ ಸಂಸ್ಥೆ ನಡೆಸುವ ನಾವು ಮುಳ್ಳಿನ ಹಾಸಿಗೆಯ ಮೇಲೆ ಮಲಗಿರುವಂತ ಸ್ಥಿತಿ ನಮ್ಮದು ಪ್ರತಿಯೊಂದು ಸೇವಾ ಕಾರ್ಯಕ್ಕೆ ಟೀಕೆ ಮಾಡುವ ಮನುಷ್ಯರು ಪ್ರಥಮವಾಗಿ ತಮ್ಮ ತಂದೆ ತಾಯಿಗಳನ್ನು ನಮ್ಮಂತಹ ವೃದ್ಧಾಶ್ರಮಕ್ಕೆ ಕಳುಹಿಸದಿರಲಿ ಎನ್ನುವ ನಿರಂತರ ಪ್ರಾರ್ಥನೆ ನನ್ನದು. ತಾವೆಲ್ಲರೂ ವೃದ್ಧಾಶ್ರಮಗಳ ಸಂಖ್ಯೆ ಜಾಸ್ತಿಯಾಗದಂತೆ ಸಾರ್ವಜನಿಕರಲ್ಲಿ ಹಿರಿಯರನ್ನು ಗೌರವಿಸಬೇಕು ಎನ್ನುವ ನಿರಂತರ ಅಭಿಯಾನ ತಮ್ಮಿಂದ ನಡೆಯಲಿ ಎನ್ನುವುದು ಕಾರುಣ್ಯ ಕುಟುಂಬದ ಆಶಯವಾಗಿದೆ. ಏಕೆಂದರೆ ಶಂಕರ ಟ್ರಸ್ಟ್ ಹುಟ್ಟಿದ ಪ್ರಥಮ ವರ್ಷದಲ್ಲಿ ನಾನು ಆ ಸಂಸ್ಥೆಯಲ್ಲಿ ಶಿಕ್ಷಣವನ್ನು ತೆಗೆದುಕೊಂಡು ಸಂಸ್ಕಾರವಂತನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಶಂಕರ್ ಟ್ರಸ್ಟ್ ಶಿಕ್ಷಣ ಸಂಸ್ಥೆ ಮೂಲ ಕಾರಣವಾಗಿದೆ. ಅಂದು ನನಗೆ ವಿದ್ಯಾದಾನ ಮಾಡಿದ ಗುರುಗಳಿಗೆ ಶಂಕರ ಟ್ರಸ್ಟ್ ಶಿಕ್ಷಣ ಸಂಸ್ಥೆಗೆ ನನ್ನ ಹಾಗೂ ನನ್ನ ಕರುಣೆ ಕುಟುಂಬದ ವತಿಯಿಂದ ಹೃದಯಪೂರ್ವಕ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುವುದರೊಂದಿಗೆ ಹಲವಾರು ವಿಷಯಗಳ ಮೂಲಕ ವಿದ್ಯಾರ್ಥಿಗಳಿಗೆ ಸೇವಾ ತರಬೇತಿಯನ್ನು ನೀಡಿದರು. ಈ ಕಾರ್ಯಗಾರದಲ್ಲಿ ಶೇಕ್ಷಾವಲಿ ಪ್ರಾಚಾರ್ಯರು ಶಂಕರ ಟ್ರಸ್ಟ್ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯ ಸಿಂಧನೂರು. ಮೌನೇಶ ಉಪನ್ಯಾಸಕರು ಶಂಕರ ಟ್ರಸ್ಟ್ ಕಾಲೇಜ್ ಸಿಂಧನೂರು. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಲಕ್ಷ್ಮಿ ಮೀನಾಕ್ಷಿಮ್ಮ ಮತ್ತು ಕಾಲೇಜಿನ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *