ತಾಲೂಕಿನ ಬೂತಲದಿನ್ನಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಮಲ್ಲಾಪುರ ಗ್ರಾಮದ ಸರ್ವೆ ನಂ-65|1 ಮತ್ತು 65|9|2 ಸರ್ವೆ ನಂ-ಹೊಲಗಳಲ್ಲಿ ರೈಸ್ ಮಿಲ್ ಸೇರಿದಂತೆ ಇನ್ನಿತರೆ ಮಿಲ್ ಗಳನ್ನು ಸ್ಥಾಪಿಸಲು ಹೊರಟಿದ್ದಾರೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಕೋರಿ ಗ್ರಾಮಸ್ಥರು  ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರಿಗೆ ತಕರಾರು ಅರ್ಜಿ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ನಾವು ಮಲ್ಲಾಪುರ ಗ್ರಾಮದ ನಿವಾಸಿಗರು, ನಮ್ಮ ಜಮೀನು ಭೂ ಪರಿವರ್ತಿತ ಜಮೀನು ಸರ್ವೆ ನಂ-65/9/1 ವಿಸ್ತೀರ್ಣ 2 ಎಕರೆ ಮತ್ತು ಸರ್ವೆ ನಂ-65/*/2 ವಿಸ್ತೀರ್ಣ 1.30 ಎಕರೆ ಜಮೀನುಗಳ ಪಕ್ಕದಲ್ಲಿ ಮನೆಗಳನ್ನು ಕಟ್ಟಿಸಿಕೊಂಡು ಜೀವನ ನಡೆಸುತ್ತಿದ್ದೇವೆ.

ಭೂಪರಿವರ್ತಿತ ಜಮೀನುಗಳ ಮಾಲೀಕರು ಪಕ್ಕದಲ್ಲಿರುವ ನಮ್ಮ ಗಮನಕ್ಕೂ ತರದೆ ಸದರಿ ಜಮೀನುಗಳು ಎಲ್ಲಾ ಒಕ್ಕಲುತನಕ್ಕಾಗಿ ಇರುವ ಜಮೀನನ್ನು ರೈಸ್ ಮಿಲ್ ಸ್ಥಾಪಿಸುವ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿದ್ದು, ಕಾನೂನು ಬಾಹಿರವೆ ಆಗಿದೆ. ಏಕೆಂದರೆ ಜಮೀನಿನಲ್ಲಿ ನಮ್ಮ ಮನೆಗಳು ಇರುವುದರಿಂದ ರೈಸ್ ಮಿಲ್ ನಿಂದ ಬರುವ ಧೂಳಿನಿಂದ ನಾವು ನೆಮ್ಮದಿಯ ಜೀವನವನ್ನು ಕಳೆದುಕೊಳ್ಳುವ ಜೊತೆಗೆ ಪಕ್ಕದಲ್ಲೇ ವಾಸಿಸಲು ಆಗುವುದಿಲ್ಲ.

ಭೂ ಪರಿವರ್ತಿತ ಜಮೀನುಗಳ ಮಾಲೀಕರು ಸದರಿ ಭೂ ಪರಿವರ್ತಿತ ಜಮೀನುಗಳಲ್ಲಿ ರೈಸ್ ಮಿಲ್ ಸ್ಥಾಪಿಸುವ ಉದ್ದೇಶದಿಂದ ಆ ಸ್ಥಳದಲ್ಲಿ ಕಚ್ಚಾ ಸಾಮಾಗ್ರಿಗಳನ್ನು ಈಗ ಶೇಖರಣೆ ಮಾಡುತ್ತಿದ್ದಾರೆ. ಜೊತೆಗೆ ಸಂಬಂಧಪಟ್ಟ ಇಲಾಖೆ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಸಹ ಪಡೆದುಕೊಂಡಿಲ್ಲ.

ಈ ಕಾರಣದಿಂದಾಗಿ ಭೂ ಪರಿವರ್ತಿತ ಜಮೀನುಗಳಲ್ಲಿ ಎಸ್‌ಎಸ್‌ಎಮ್ ರೈಸ್ ಇಂಡಸ್ಟ್ರೀಸ್ ಎಲ್‌ಎಲ್‌ಪಿ ಇದರ ಜಂಟಿ ಪಾಲುದಾರರಾದ ಶರಣಬಸವರಾಜ ತಂದೆ ಶರಣಪ್ಪಗೌಡ, ಎಮ್.ರೆಡ್ಡಿ ತಂದೆ ಡಾ.ಆರ್.ಮಹಬಲೇಶ್ವರರೆಡ್ಡಿ ಮತ್ತು ಸರ್ವಮಂಗಳ ಅಬಲೂರು ಗಂಡ ಶಿವಪ್ರಸಾದ ಅಬಲೂರು, ಶರಣಬಸವ ತಂದೆ ಸಿದ್ದಲಿಂಗಪ್ಪ ಇವರಿಗೆ ಭೂ ಪರಿವರ್ತಿತ ಜಮೀನುಗಳಲ್ಲಿ ಯಾವುದೇ ರೈಸ್ ನಿರ್ಮಾಣ ಮಾಡದಂತೆ ತಡೆ ಹಿಡಿದು, ನಮ್ಮ ಹಿತ ಕಾಪಾಡಬೇಕೆಂದು ವಿನಂತಿ ಮಾಡಿಕೊಂಡರು.

ಒಂದುವೇಳೆ ನಮ್ಮ ತಕರಾರು ಅರ್ಜಿ ಪರಿಗಣನೆಗೆ ತೆಗೆದುಕೊಳ್ಳದೆ ಅನುಮತಿ ನೀಡಿದರೆ, ನಮ್ಮ ಶಾಂತತೆಗೆ ಭಂಗ ಉಂಟುಮಾಡಿದರೆ ಗಲಾಟೆಯಾಗಿ ಏನಾದರೂ ಹೆಚ್ಚುಕಮ್ಮಿಯಾದರೆ, ಇದಕ್ಕೆ ನೇರ ರೈಸ್ ಮಿಲ್ ಸ್ಥಾಪಿಸುವ ಮಾಲೀಕರೆ ಕಾರಣರಾಗುತ್ತಾರೆಂದು ಎಚ್ಚರಿಸಿದರು.

ಈ ವೇಳೆ: ಸಿದ್ದನಗೌಡ, ಯಂಕಪ್ಪ, ಈರಮ್ಮ, ಚನ್ನಪ್ಪ, ವೆಂಕೋಬ, ಅಂಬಣ್ಣ, ಮಲ್ಲಪ್ಪ, ನಾಗರಾಜ, ರಾಜಮ್ಮ, ರಡ್ಡೆಪ್ಪ, ರಮೇಶ, ದುಗ್ಗಪ್ಪ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *