ಜಾಲಹಳ್ಳಿ : ಫೆ 25 ಬೆಳಿಗ್ಗೆ ಸುರಿದ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹೊಸೂರು ಸಿದ್ದಾಪುರ ಗ್ರಾಮದ ರೈತ ಕೃಷ್ಣ ಯಾದವ್ ಅವರ ಸರ್ವೆ ನಂ. 83 ರಲ್ಲಿರುವ 7 ಎಕರೆ ಜಮೀನಿನ ಸಜ್ಜೆ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿ ನಾಶವಾಗಿದೆ.

ಜಾಲಹಳ್ಳಿ ಹಾಗೂ ಹೊಸೂರು ಸಿದ್ದಾಪುರ ಗ್ರಾಮಗಳಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಸಜ್ಜೆ ಬೆಳೆ ಸಂಪೂರ್ಣವಾಗಿ ಮಲಗಿಕೊಂಡು ಹಾನಿಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಗಳ ಸರ್ವೆ ನಡೆಸಿ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ರೈತ ಕೃಷ್ಣ ಯಾದವ್ ಅವರು ವರದಿಗಾರರೊಂದಿಗೆ ಮಾತನಾಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರೈತರು ಸಂಕಷ್ಟದಲ್ಲಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವರದಿ:
ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ

Leave a Reply

Your email address will not be published. Required fields are marked *