ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕರೆ ನೀಡಿದ್ದ “ಕೊಪ್ಪಳ – ಭಾಗ್ಯನಗರ ಬಂದ್” ಯಶಸ್ವಿಯಾಗಿದ್ದು, ಅನೇಕ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ರೈತ ಸಂಘಟನೆಗಳು ಈ ಬಂದ್ ಗೆ ಬೆಂಬಲ ಸೂಚಿಸಿದ್ದವು.
ಬಲ್ಡೋಟ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಕಳೆದ 117 ದಿನಗಳಿಂದ ಹೋರಾಟವು ನಡೆಯುತಿತ್ತು, ಕಳೆದ ವರ್ಷ ಫೆ.24ಕ್ಕೆ ನಡೆದ “ಕೊಪ್ಪಳ ಬಂದ್” ಹೋರಾಟದಂತೆ ಈ ವರ್ಷವು “ಕೊಪ್ಪಳ-ಭಾಗ್ಯನಗರ ಬಂದ್ ” ಮಾಡಿ ಸರ್ಕಾಕ್ಕೆ ಮತ್ತು ಜನ ಪ್ರತಿ ನಿಧಿಗಳಿಗೆ ಬಿಸಿಮುಟ್ಟಿಸಿದ್ದಾರೆ.
ಕೊಪ್ಪಳದ ಗವಿಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯೂ ಗಡಿಯಾರ ಕಂಬ ಅಶೋಕ ವೃತ್ತದ ಮಾರ್ಗವಾಗಿ ನಗರಸಭೆಯ ಬಳಿ ನಿರ್ಮಿಸಲಾಗಿದ್ದ ವೇದಿಕೆಗೆ ಬಂದು ತಲುಪಿತು. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ, ಮನೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಇದರಿಂದ ಜನರು ತಮ್ಮ ಬದುಕು ನಡೆಸುವುದೇ ಕಷ್ಟದ ಪರಿಸ್ಥಿಯಾಗಿದೆ ಎಂದು ರೈತರು ಮತ್ತು ಜನರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆ ಕಾರ್ಖಾನೆಗಳ ಹೊಗೆಯಿಂದ ಹಾಳಾದ ಹಲವು ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದ ರೈತರು ಪ್ರದರ್ಶಿಸುತ್ತಾ ಮೆರವಣಿಗೆಯೊಂದಿಗೆ ಸಾಗಿ ನಮ್ಮ ಈ ಗೋಳು ಸರ್ಕಾರಕ್ಕೆ ಮುಟ್ಟುತ್ತಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹಿರೇಬಗನಾಳದ ರೈತ ಮಂಜುನಾಥ ಆಕ್ಸಿಜನ್ ಮಾಸ್ಕ್ ಧರಿಸಿ ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಉಸಿರಾಡಲು ತೊಂದರೆ ಅಗುತ್ತಿರುವುದರ ಬಗ್ಗೆ ಪ್ರದರ್ಶಿಸಿದರು.

ತೆಗೆದು ಕೊಂಡ ನಿರ್ಣಯಗಳು :

► ಬಲ್ಡೋಟ ತೊಲಗುವವರೆಗೆ ಹೋರಾಟ ಮುಂದುವರಿಸುವುದು, ಮುಂದುವರಿದ ಭಾಗವಾಗಿ ರಸ್ತೆ ತಡೆ, ರೈಲು ತಡೆ ಮುಂತಾದ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು.

►ಶಾಸಕರು, ಜಿಲ್ಲಾಮಂತ್ರಿಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಸರ್ವಪಕ್ಷಗಳ ಮತ್ತು ಆಂದೋಲನದ ಮುಖಂಡರ ನಿಯೋಗವನ್ನು ಮುಖ್ಯಂತ್ರಿಗಳ ಬಳಿ ಕೊಂಡೊಯ್ದು ಆರೋಗ್ಯದ ಹಾನಿ ಕುರಿತು ಮನವರಿಕೆ ಮಾಡಿಕೊಡುವುದು.

► ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಲ್ಡೋಟ ಕಂಪನಿ ಬಸಾಪುರ ಕೆರೆಯನ್ನು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವು ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು.

► ಐ.ಐ.ಎಸ್. ಸಿ ಮತ್ತು ಎಐಐಎಂಎಸ್ ಪರಿಸರ, ಆರೋಗ್ಯ ಸಮೀಕ್ಷೆ ನಡೆಸಬೇಕು.

► ಪರಿಸರ ತಜ್ಞರ ವರದಿಯಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು.

► ಮುಖ್ಯಮಂತ್ರಿಗಳು, ಕೈಗಾರಿಕಾ ಮಂತ್ರಿ ಬಾಧಿತ ಹಳ್ಳಿಗೆ ಭೇಟಿ ನೀಡಬೇಕು.

► ತುಂಗಭದ್ರಾ ನದಿಯನ್ನು ವಿಷಗೊಳಿಸಿದ ಕಾರ್ಖಾನೆ ಗಳನ್ನು ಮುಚ್ಚಬೇಕು.

► ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡುವುದು.

► ಬಾಧಿತ ಹಳ್ಳಿಗಳಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು.

► ಸರ್ಕಾರ ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಬಿ. ಗೋನಾಳ, ಸಂಚಾಲಕರು, ಜಂಟಿ ಕ್ರಿಯಾ ವೇದಿಕೆ ಸಾನಿಧ್ಯವನ್ನು ಪಂಡಿತಾರಾಧ್ಯ ಶ್ರೀ ಶಿವಾಚಾರ್ಯ ಸ್ವಾಮಿಗಳು, ಸಾಣೇಹಳ್ಳಿ, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮಿಗಳು, ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಜೇವರ್ಗಿ, ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ, ರಾಜಶೇಖರ ಹಿಟ್ನಾಳ, ಸಂಸದರು, ಕೊಪ್ಪಳ,ಸಂಗಣ್ಣ ಕರಡಿ, ಮಾಜಿ ಸಂಸದರು ಕೊಪ್ಪಳ, ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯರು, ಕೊಪ್ಪಳ , ಎ.ಟಿ. ರಾಮಸ್ವಾಮಿ, ಮಾಜಿ ಶಾಸಕರು, ಅಧ್ಯಕ್ಷರು, ಪರಿಸರಕ್ಕಾಗಿ ನಾವು, ಬೆಂಗಳೂರು, ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಚಾಮರಸ ಮಾಲಿಪಾಟೀಲ್, ಗೌರವಾಧ್ಯಕ್ಷರು, ಕೈ.ರಾ.ರೈ.ಸಂಘ, ವಿ.ಎನ್. ರಾಜಶೇಖರ, ರಾಷ್ಟ್ರೀಯ ಉಪಾಧ್ಯಕ್ಷರು, ಶಿಕ್ಷಣ ಉಳಿಸಿ ಸಮಿತಿ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಮಂತ್ರಿಗಳು, ಕುಷ್ಟಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಪ್ರಸನ್ನ ಗಡಾದ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಕೊಪ್ಪಳ, ರಮೇಶ್ ಹ್ಯಾಟಿ, ಅಧ್ಯಕ್ಷರು, ಭಾಗ್ಯನಗರ ಪಟ್ಟಣ ಪಂಚಾಯಿತಿ, ಅಮ್ಜದ್ ಪಟೇಲ್, ಮಾಜಿ ಅಧ್ಯಕ್ಷರು ನಗರಸಭೆ ಸಿ.ವಿ. ಚಂದ್ರಶೇಖರ, ರಾಜಕೀಯ ಧುರೀಣರು, ಕೊಪ್ಪಳ, ಡಿ.ಎಚ್. ಪೂಜಾರ, ಕೃಷಿ ಬೆಲೆ ಆಯೋಗದ ಸದಸ್ಯರು, ಕೊಪ್ಪಳ, ವೀರಣ್ಣ ಬುಳ್ಳಾ, ಅಧ್ಯಕ್ಷರು, ಗಂಜ್ ವರ್ತಕರ ಸಂಘ, ಕೊಪ್ಪಳ, ಎ.ವಿ. ಕಣವಿ ವಕೀಲರು, ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ, ಕೊಪ್ಪಳ, ವಿ.ಎಂ.ಭೂಸನೂರು ಮಠ ಹಿರಿಯ ನ್ಯಾಯವಾದಿಗಳ, ಕೊಪ್ಪಳ, ಬಾವರಾಜ ಬಳ್ಳೊಳ್ಳಿ ಲಯನ್ಸ್ ಕ್ಲಬ್ ಕೊಪ್ಪಳ, ಪೀರಾ ಹುಸೇನ್ ಹೊಸಳ್ಳಿ ಹಿರಿಯ ವಕೀಲರು, ದಾನಪ್ಪ ಕವಲೂರು, ಮಾಜಿ ತಾ.ಪಂ. ಸದಸ್ಯರು, ಭಾಗ್ಯನಗರ, ಚಂದ್ರಶೇಖರ್ ಕವಲೂರು, ರಾಜಕೀಯ ಧುರೀಣರು, ಕೊಪ್ಪಳ , ಗೊಂಡಬಾಳ, ಮಹಿಳಾ ದುರೀಣೆ, ಕೊಪ್ಪಳ ,ಕಾವ್ಯಾ ಗಡಾದ, ಮಹಿಳಾ ಮುಖಂಡರು ಕೊಪ್ಪಳ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ್, ವಿದ್ಯಾ ನಾಲ್ವಾಡ, ಎಂ.ಕೆ. ಸಾಹೇಬ್, ಮಂಜುನಾಥ ಜಿ. ಗೊಂಡಬಾಳ ಮತ್ತು ರಮೇಶ ತುಪ್ಪದ, ಪರಿಸರ ಗಾಯನ ಸದಾಶಿವ ಪಾಟೀಲ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *