ತಾಳಿಕೋಟಿ: ಪಟ್ಟಣದ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಳಿಕೋಟಿ ತಾಲೂಕ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸ, ರಸಪ್ರಶ್ನೆ ಹಾಗೂ ವಯೋನಿವೃತ್ತಿ ಹೊಂದಿದ ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ತಹಸಿಲ್ದಾರ್ ಡಾ. ವಿನಯಾ ಹೂಗಾರ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಬಿಇಓ ಬಿ.ಎಸ್.ಸಾವಳಗಿ, ಉಪನ್ಯಾಸಕ ಮುಜಾವರ, ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಜ ಬಿರಾದಾರ, ತಾಲೂಕ ಅಧ್ಯಕ್ಷ ವೈ ಬಿ ಬಡಿಗೇರ, ಎಸ್ಎಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್ ಎಸ್ ಪಾಟೀಲ, ಇಸಿಓ ಆರ್.ಬಿ.ದಮ್ಮೂರಮಠ, ಶಿಕ್ಷಕಿ ಸುವರ್ಣಾ ಗದುಗಿನಮಠ,ಉದ್ಯಮಿ ಪರಶುರಾಮ ಹಂಚಾಟೆ, ಡಾ.ಅನೀಲಕುಮಾರ ಇರಾಜ,ಬಿ.ಐ.ಹಿರೇಹೊಳಿ,ಸಚೀನ ಹಂಚಾಟೆ, ಎನ್.ಬಿ. ಪಿಂಜಾರ,ಕ.ರಾ.ಸ.ನೌ.ಸಂ. ತಾಲೂಕಾಧ್ಯಕ್ಷ ಎಸ್.ಬಿ.ಚೌದ್ರಿ,ನೋಡಲ್ ಅಧಿಕಾರಿ ಎಂ.ಕೆ.ಬಾಗವಾನ, ಶಿಕ್ಷಕಿ ಆರ್.ಜಿ. ದೇಸಾಯಿ, ಒಡೆಯರ್,ಸಹ ಶಿಕ್ಷಕ ಅರ್ಜುನ ಮಲ್ಲೇವಾಡಿ, ಸಂತೋಷ ಕದಂ, ಬಾಪುಗೌಡ ಪಾಟೀಲ, ಸಿಆರ್ಸಿ ರಾಜು ವಿಜಾಪುರ, ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಪದಾಧಿಕಾರಿ,ನಾಮ ನಿರ್ದೇಶಿತ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

