ಸಿಂಧನೂರು ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಸಿದ್ದಯ್ಯನ ಮಠ ಉಪ್ಪಾರವಾಡಿಯಲ್ಲಿ ಜರುಗಿದ ವಶಿಷ್ಠಧಾಮ ಸೇವಾ ಟ್ರಸ್ಟ್ ನ ವತಿಯಿಂದ ಶಾಲಾ ಮಕ್ಕಳಿಗೆ ಕಂಪಾಸ್ ಬಾಕ್ಸ್ ಹಾಗೂ ವಾಟರ್ ಬಾಟಲ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಭೀಮಸೇನ ಆಚಾರ್ಯರು ವಿದ್ಯಾರ್ಥಿ ಜೀವನವು ಅತಿಸುಂದರ ಸುಖಮಯ ಜೀವನವಾಗಿದೆ. ಅದನ್ನು ಸಮರ್ಥವಾಗಿ ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು ಸಮಾಜದಲ್ಲಿ ವಿಶೇಷ ವ್ಯಕ್ತಿಗಳಾಗಬೇಕೆಂದು ಹೇಳಿದರು.
ತಂದೆ ತಾಯಿಯ ಹಾಗೂ ಗುರುಗಳ ಮಾತುಗಳನ್ನು ಕೇಳಿ ವಿದ್ಯಾವಂತರಾಗಿ ಒಳ್ಳೆಯ ಪ್ರಜೆಗಳಾಗಬೇಕೆಂದರು.
ಮುಖ್ಯಅತಿಥಿಗಳಾಗಿ ಆಗಮಿಸಿದ ವಸಿಷ್ಠಧಾಮ ಟ್ರಸ್ಟ್ ಸದಸ್ಯೆ ಶೋಭಾ ನವಲಿ, ಸುಧಾಕರರಾವ್ ಕುಲಕರ್ಣಿ ಗುಲಬರ್ಗ.
ಮುಖ್ಯಗುರುಗಳಾದ ಸಾವಿತ್ರಿ ದೀಕ್ಷಿತ್ ಪ್ರಭಾರಿ ಮುಖ್ಯಗುರುಗಳಾದ ಗಿರೀಶ್ ವಿ.ಬಿ ಮಾತನಾಡಿದರು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಹುಲಿಗೆಮ್ಮ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

