ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮದ ಪರ್ವತೇಶ್ವರ ಬ್ರಹನ್ಮಠದ ಪೂಜ್ಯ ಷ.ಬ್ರ.ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಫೆ.25 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಘಂಟೆ ಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಹೃದಯ ಕಾಯಿಲೆ, ನೇತ್ರ ತಪಾಸಣೆ, ಕಿಡ್ನಿ ಹರಳು, ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಪಾರ್ಶ್ವ ವಾಯು, ಬೆನ್ನ ನೋವು ಹಾಗೂ ಇತರೆ ಕಾಯಿಲೆಗಳ ತಪಾಸಣೆ ಉಚಿತವಾಗಿ ನಡೆಸಲಾಗುವುದು. ಈ ಶಿಬಿರದ ನೇತೃತ್ವವನ್ನು ಡಾ.ಗುರುಲಿಂಗಯ್ಯ ಹಿರೇಮಠ,ಡಾ.ಗುರುಮೂರ್ತಯ್ಯ ಹಿರೇಮಠ ಹಾಗೂ ಡಾ. ಕರಬಸಯ್ಯ ಹಿರೇಮಠ ವಹಿಸುವರು. ಶಿಬಿರದಲ್ಲಿ ಹೃದಯ ರೋಗ ತಜ್ಞ ಡಾ.ರಾಜಕುಮಾರ ಹಿರೇಮಠ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ರಶ್ಮಿ ರಾ.ಹಿರೇಮಠ, ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ), ವೈದ್ಯಾಧಿಕಾರಿ ಡಾ. ಶ್ರೀದೇವಿ ಹಿರೇಮಠ, ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವರಾಜ ಒಡೆಯರ್ ಹಿರೇಮಠ, ಡಾ.ರುದ್ರಸ್ವಾಮಿ ಹಿರೇಮಠ, ಡಾ. ಆರೀಫ್ ಮನಿಯಾರ, ಡಾ. ಚಂದ್ರಶೇಖರ್ ನಾಗಲಿಕರ್, ಬಾಪುಗೌಡ ವಣಕಿಹಾಳ,ಡಾ.ಹರ್ಷವರ್ಧನ ಹಳ್ಳಿ ಪಾಟೀಲ,ಡಾ.ಚಂದ್ರಶೇಖರ ಶಿವಯೋಗಿಮಠ ಇವುರಗಳು ಭಾಗವಹಿಸಿ ರೋಗಿಗಳ ತಪಾಸಣೆ ನಡೆಸುವರು. ನಾವದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು. ಬರುವಾಗ ಈ ಮೊದಲು ವೈದ್ಯರ ಬಳಿ ತಪಾಸಣೆ ನಡೆಸಿದ್ದರೆ ಅವರ ವರದಿಯನ್ನು ಜೊತೆಯಲ್ಲಿ ತರಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

