ಸಿಂಧನೂರು ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ವರ್ಧಂತಿ ಉತ್ಸವದ ಪ್ರಯುಕ್ತ ಭಜನೆ, ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದವು. ಬೆಂಗಳೂರಿನ ಪ್ರವಚನಕಾರ ಗುರುರಾಜ ದಾಸ್ ಅವರಿಂದ ‘ಶ್ರೀ ಗುರು ಕಾರುಣ್ಯ’ಕುರಿತು ವಿಶೇಷ ಉಪನ್ಯಾಸ ಹಾಗೂ ಹುಬ್ಬಳ್ಳಿಯ ಆರ್.ಪಿ.ಕುಲಕರ್ಣಿ ತಂಡದವರಿಂದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆದವು.

ಪ್ರತಿನಿತ್ಯ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆದವು. ಕಾರ್ಯಕ್ರಮದಲ್ಲಿ ರಾಯರ ಮಠದ ವಿಚಾರಣಾ ಕರ್ತ ರಾಘವೇಂದ್ರರಾವ್ ಕುಲಕರ್ಣಿ ಅರ್ಚಕ ನವೀನ್ ಆಚಾರ್ ಮುಖಂಡರಾದ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಎಂ.ಕೆ.ಗೌರ್ಕರ್, ವೆಂಕಣ್ಣ ಆಚಾರ್ಯ ಜೋಶಿ, ಗುರುರಾಜ ಆಲ್ದಾಳ, ಗೋಪಾಲ್ ಆಚಾರ ಜೋಶಿ, ಶ್ರೀಧರ ಕುಲಕರ್ಣಿ, ಪ್ರಹ್ಲಾದ ಗುಡಿ, ಹನುಮಂತ ಆಚಾರ್ಯ ಮಸ್ಕಿ, ವಾಸುದೇವ ಆಚಾರ್ಯ ಉಪ್ಪಳ, ಗುರುರಾಜ, ಹನುಮಂತರಾವ್, ಆನಂದ ಗೌರ್ಕರ್, ವಾದಿರಾಜ ಹೆಡಿಗಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *