ಸಿಂಧನೂರು : ಫೆ 23 ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರ ವತಿಯಿಂದ ಭೋಗಾಪುರ ಗ್ರಾಮದಲ್ಲಿ ನಾಯಿ ಕಡಿತ ಮತ್ತು ಹಾವು ಕಡಿತದ ಪ್ರಥಮ ಚಿಕಿತ್ಸೆ, ಕ್ರಮಗಳ ಕುರಿತು ಶ್ರೀಮತಿ ಗೀತಾ ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿಗಳು ಮಾತನಾಡಿ ನಾಯಿ ಮತ್ತು ಹಾವು ಕಚ್ಚಿದ ತಕ್ಷಣ ಗಾಬರಿಯಾಗದೆ ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಶಾಂತವಾಗಿಸಿ ಗಾಯಗೊಂಡ ಭಾಗವನ್ನು ಸ್ಥಿರವಾಗಿ ಮತ್ತು ಹೃದಯಕ್ಕಿಂತ ಕೆಳಗೆ ಇರಿಸಿ ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ಸಹಾಯ (108 )ಪಡೆಯಬೇಕು ಗಾಯವನ್ನು ಸೋಪ್ ಮತ್ತು ನೀರಿನಿಂದ ಅಥವಾ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಕಚ್ಚಿದ ಜಾಗವನ್ನು ಕತ್ತರಿಸಬೇಡಿ, ಬಾಯಿಯಿಂದ ವಿಷ ಹೀರಬೇಡಿ ಬಟ್ಟೆಗಳನ್ನು ಕಟ್ಟಬೇಡಿ ಹಾವು ಕಡಿದ ವ್ಯಕ್ತಿಯನ್ನು ಕದಲದಂತೆನೋಡಿಕೊಳ್ಳಬೇಕು ಬಿಗಿಯಾದ ವಸ್ತುಗಳೆನಾದರೂ ಇದ್ದರೆ ತೆಗೆಯಬೇಕು, ಗವಯವನ್ನು ಆರೈಕೆಯನ್ನು ಮಾಡಬೇಕು ಐಸ್ ಹಾಕಬಾರದು, ಬೇಸಿಗೆ ಕಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ಮಾಹಿತಿ ನೀಡಲಾಯಿತು,ನಂತರ ನಿಖಿಲ ತಾಲೂಕು epidemiologist ವಾಂತಿ ಭೇದಿ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮತ್ತು ಹಾವು ನಾಯಿ ಕಡಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು ಮತ್ತು ಸಂಪ್ರದಾಯಿಕ ಚಿಕಿತ್ಸೆಕರು, ದೇವರ ಹೆಸರಲ್ಲಿ ಚಿಕಿಸ್ತೆ ನೀಡುವವರ ಹತ್ತಿರ ಹೋಗದೆ ಹತ್ತಿರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಅರಿವು ಮೂಡಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಆಂಜನೇಯ S/N, ಗುರುನಾಥ LTO,,ಲಕ್ಷ್ಮಿದೇವಿ PHCO ಕಲ್ಮಂಗಿ, ರಾಧಾ ಆಶಾ ಕಾರ್ಯಕರ್ತೆ, ದುರ್ಗಮ್ಮ, ಮಲ್ಲಮ್ಮ ಅಂಗನವಾಡಿ ಕಾರ್ಯಕರ್ತೆಯರು ಮೈಭೂಬ್ ಸಬ್, ಗರ್ಭಿಣಿ ಹಾಗೂ ತಾಯಂದಿರು, ಸಾರ್ವಜನಿಕರು ಭಾಗವಹಿಸಿದ್ದರು.


