ಅರಕೇರಾ : ಕನ್ನಡ ಸೇನೆ ಕರ್ನಾಟಕ ಅರಕೇರಾ ತಾಲೂಕು ಘಟಕದವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡುವಂತೆ ಕನ್ನಡ ಸೇನೆ ಕರ್ನಾಟಕ ತಾಲೂಕ ಘಟಕದ ಅಧ್ಯಕ್ಷರಾದ ಮೈಹಿಬೂಬ ಬಡಿಗೇರಾ ಹಾಗೂ ಪದಾಧಿಕಾರಿಗಳು ಅರಕೇರಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಅರಕೇರಾ ಪಟ್ಟಣದಲ್ಲಿ ಬಡ ಕೂಲಿ ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಿ ಸುಮಾರು ೨ ತಿಂಗಳು ಆದರೂ ಕೆಲಸ ನೀಡಿದೆ ತಾಂತ್ರಿಕ ದೋಷ ನೆಪ ಹೇಳುತ್ತಿದ್ದಾರೆ. ಕಾರಣ ಜನರು ಗ್ರಾಮ ಪಂಚಾಯತಿಗೆ ಅಲೇದು ಬೇಸತ್ತು ಹೋಗಿದ್ದಾರೆ,ಗುಳೆ ಹೋಗುತ್ತಿದ್ದಾರೆ.
ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಕೆಲಸ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಅರಕೇರಾ ತಾಲೂಕು ಪಂಚಾಯತ ಕಾರ್ಯನಿರ್ವಾಕ ಅಧಿಕಾರಿಗಳಿಗೆ ಕನ್ನಡ ಸೇನೆ ಕರ್ನಾಟಕ ತಾಲೂಕು ಘಟಕದವತಿಯಿಂದ ಮನವಿಮಾಡಿಕೊಂಡರು. ಒಂದು ವೇಳೆ ಕೆಲಸ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯತ ಮುಂದೆ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕ ತಾಲೂಕ ಘಟಕದ ಅಧ್ಯಕ್ಷರಾದ ಮೈಹಿಬೂಬ ಬಡಿಗೇರಾ ಪ್ರಧಾನ ಕಾರ್ಯದರ್ಶಿ ಹನುಂತ್ರಾಯಗಾಲಿ, ಅರಕೇರಾ ನಗರ ಘಟಕದ ಅಧ್ಯಕ್ಷರಾದ ಶಿವಗೇನಿ , ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಸನಗೌಡ ಎಂ, ಕರ್ನಾಳ ,ರಮೇಶ ಸಾತಲ್, ಯಲ್ಲಪ್ಪ ಸಾತಲ್ ಉಪಸ್ಥಿತರಿದ್ದರು.
ಚಿತ್ರಸುದ್ದಿ ಸಂಖ್ಯೆ ೨೩(೧) ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡಿ ಅರಕೇರಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕನ್ನಡ ಸೇನೆ ಕರ್ನಾಟಕ ಅರಕೇರಾ ತಾಲೂಕು ಘಟಕದವತಿಯಿಂದ ಮನವಿ ಪತ್ರಸಲ್ಲಿಸುತ್ತಿರುವದು. .

