ಮಾನ್ವಿ : ಪಟ್ಟಣದ ಕುಂಬಾರ ಓಣೆಯಲ್ಲಿ ಆದಿ ಕವಿ ಸರ್ವಜ್ಞ ಜಯಂತೋತ್ಸವದ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ಕೆ.ಮಲ್ಲೇಶ ಕುಂಬಾರ ಮಾತನಾಡಿ, ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಅವರ ತತ್ವಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ವಜ್ಞರು ಸಮಾನತೆ, ಸತ್ಯ ಮತ್ತು ನೈತಿಕ ಮೌಲ್ಯಗಳನ್ನು ಸಾರಿದ ಮಹಾನ್ ಸಂತರು. ಅವರ ಜಯಂತಿಯನ್ನು ಆಚರಿಸುವುದು ಅವರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದಕ್ಕೆ ಸಹಕಾರಿ ಆಗುತ್ತದೆ. ಇಂತಹ ಮಹನೀಯರ ತತ್ವಗಳನ್ನು ಯುವಕರು ಅರಿತು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನೇಕಾರ ಸಮುದಾಯಗಳ ಕೂಟದ ಜಿಲ್ಲಾಧ್ಯಕ್ಷ ಜಿ.ನಾಗರಾಜ, ರಾಜಾ ಮಹೇಂದ್ರ ನಾಯಕ ದೊರೆ, ದೊಡ್ಡಣ್ಣ ಹೂಗಾರ್, ರಾಜಾ ಸುಭಾಷಚಂದ್ರ ನಾಯಕ್ ದೊರೆ, ನಾಗೇಶ್ ಕಬ್ಬೆರ್, ಪ್ರಭು ಕುಂಬಾರ್, ಹೂಗಾರ ಸಮಾಜದ ಉಪಾಧ್ಯಕ್ಷ ಬಸವರಾಜ, ನರಸಿಂಹ ಹೇಳವರ್, ಮೌಲಪ್ಪ ಚೀಕಲಪರ್ವಿ, ಮಲ್ಲಪ್ಪ ಹೂಗಾರ್, ಬಸವರಾಜ ಕುಂಬಾರ್, ಶರಣಪ್ಪ ಕುಂಬಾರ್, ಡಾ. ಮಲ್ಲಿಕಾರ್ಜುನ್, ಪ್ರಲ್ಲಾದ್, ಆಂಜನೇಯ, ಸಿದ್ದು, ನಾಗರಾಜ, ಅಮರೇಶ, ಅಂಬಣ್ಣ, ರವಿಕುಮಾರ ಕುಂಬಾರ, ಸಂತೊಷ ಹೂಗಾರ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *