ಸಿಂಧನೂರು : ಫೆಬ್ರವರಿ 21 ತಾಲೂಕಿನ ಸಮೀಪದ ಜಂಗಮರಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೇಸಿಗೆಯಲ್ಲಿ ಅತಿಸಾರ ಭೇದಿ ಉಂಟಾಗದಂತೆ ಎಚ್ಚರ ವಹಿಸಲು ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರ ಮಾತನಾಡಿದರು ಮಾನವನ ದೇಹದಲ್ಲಿ ಕಂಡು ಬರುವ ಸೂಕ್ಷ್ಮಾಣುಗಳಿಂದ ಅನೇಕ ಖಾಯಿಲೆಗಳು ಬರಬಹುದು ಅದರಲ್ಲಿ ವಿಶೇಷವಾಗಿ ಅತಿಸಾರ ಬೇಧಿ ಪ್ರಮುಖವಾಗಿರುತ್ತದೆ ಒಂದು ವೇಳೆ ಸೂಕ್ಷ್ಮಾಣು ಜೀವಿಗಳು ನೀರು ಅಥವಾ ಆಹಾರದೊಳಗೆ ಸೇರಿದ್ದಲ್ಲಿ ಹಾಗೂ ಆಹಾರದ ತಯಾರಿಕೆ ಮತ್ತು ಸೇವಿಸುವಿಕೆ ಕ್ರಿಯೆಗಳು ಮೂಲಕ ಮಾನವನ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣ ಉಂಟಾಗುತ್ತದೆ. ಮನುಷ್ಯರಲ್ಲಿ ಸೂಕ್ಷ್ಮಜೀವಿಗಳನ್ನು ಆಹಾರ ಮತ್ತು ನೀರಿನ ಮುಖಾಂತರ ಹರಡುತ್ತವೆ ಸ್ವಚ್ಛ ಇಲ್ಲದ ಮನುಷ್ಯನ ದೇಹ ಕೈ ಮುಖ ಮತ್ತು ನೊಣಗಳು ಆಕರ್ಷಿಸುತ್ತದೆ ಸೂಕ್ಷ್ಮಾಣುಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಾಡುತ್ತವೆ ದೃಷ್ಟಿಯು ದುರ್ಬಲಗೊಳ್ಳಬಹುದು ಅಥವಾ ಕಳೆದುಕೊಳ್ಳಬಹುದು
ಅತಿಸಾರ ಭೇದಿ ಉಂಟಾದಲ್ಲಿ ತಕ್ಷಣ ಮಗುವಿಗೆ ಒಂದು ಲೀಟರ್ ನಷ್ಟು ಶುದ್ಧವಾದ ಮತ್ತು ಸುರಕ್ಷಿತವಾದ ಕುಡಿಯುವ ನೀರನ್ನು ಒಂದು ಜಾರು ಮತ್ತು ಪಾತ್ರೆಯಲ್ಲಿ ತೆಗೆದುಕೊಳ್ಳಿ ಒಂದು ಓ ಆರ್ ಎಸ್ ಪುಡಿಯ ಪಾಕೆಟ್ ಅನ್ನು ಹಾಕಿ ಅದನ್ನು ಚೆನ್ನಾಗಿ ಕಲಿಸಿ ಒಂದು ಸಣ್ಣನೆಯ ಸ್ವಚ್ಛವಾದ ನೋಟದಲ್ಲಿ ಬೆರೆಸಿ ದ್ರಾವಣವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಚಮಚದ ಮೂಲಕ ಮಗುವಿಗೆ ಕುಡಿಸಿ ಮತ್ತು ಜಿಂಕ್ ಮಾತ್ರೆ ಮತ್ತು ಸರಪನ್ನು ಸರಿಯಾದ ಪ್ರಮಾಣದಲ್ಲಿ ನೀಡುವ ಮೂಲಕ ಅತಿಸಾರ ಭೇದಿಯನ್ನು ತಡೆಗಟ್ಟಬಹುದಾಗಿದೆ. ವಯಸ್ಸಿಗೆ ಅನುಗುಣವಾಗಿ ಸ್ತನ್ಯಪಾನ ಹಾಗೂ ಆಹಾರ ಉಣಿಸುವುದನ್ನು ಮುಂದುವರಿಸಬೇಕು ಮಗುವಿನ ಕಣ್ಣು ಗುಳಿ ಹೋಗಿರುವುದು ಹೊಟ್ಟೆ ಕಿವಿಚಿರುವುದು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ರಾಧಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮಹಾದೇವಿ ಅಂಗನವಾಡಿ ಸಹಾಯಕಿ ಸುಜಾತಾ ಆಶಾ ಕಾರ್ಯಕರ್ತೆಯರಾದ ಶರಣಮ್ಮ ಹಾಗೂ ತಾಯಿಂದಿರು ಉಪಸ್ಥಿತರಿದ್ದರು

