ಸಿಂಧನೂರು – ನಗರದ ತಹಶಿಲ್ದಾರ ಕಛೇರಿಯಲ್ಲಿ ಸ್ವಚ್ಛಭಾರತ ಮಿಷನ್ 2.0 ಯೋಜನೆಯಡಿಯಲ್ಲಿ ಸ್ವಚ್ಛ ನಗರ,ಬಯಲು ಬಹಿರ್ದೆಸೆ ಹಾಗೂ ಪ್ಲಾಸ್ಟಿಕ್ ಮುಕ್ತ ನಗರ ಕುರಿತು ಕಲಾವಿದರಿಂದ ಜಾಗೃತಿ ಅಭಿಯಾನಕ್ಕೆ ತಹಶಿಲ್ದಾರ ಅರುಣ್ ದೇಸಾಯಿ ಇಂದು ಚಾಲನೆ ನೀಡಿದರು.

ನಗರ ಸಭೆ ಸಿಂಧನೂರು
ಮತ್ತು ಸಂಕಲ್ಪ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಾನ್ವಿ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಮುಖಾಂತರ ಜಾಗೃತಿ ಕಾರ್ಯಕ್ರಮಕ್ಕೆ ನಗರ ಸಭೆ ಪೌರಾಯುಕ್ತತಮಟೆ ಬಡಿಯುವ ಮುಖಾಂತರ ಚಾಲನೆನೀಡಿದರು.ಸ್ವಚ್ಛ ಭಾರತ ಬಯಲು ಬಹಿರ್ದೆಸೆ, ಪ್ಲಾಸ್ಟಿಕ್ ಮುಕ್ತನಗರವಾಗಿಸಬೇಕು.

ಅತಿಯಾದ ಪ್ಲಾಸ್ಟಿಕ್ ಬಳಕೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ.ಕಸ ವಿಲೇವಾರಿಯಲ್ಲಿ ಹಸಿಕಸ,ಒಣಕಸ, ಅಪಾಯಕಾರಿ ಕಸನಿಮ್ಮ ಮನೆಗಳಲ್ಲಿ ವಿಂಗಡಣೆ ಮಾಡಿ ನಗರ ಸಭೆ ಪೌರ ಕಾರ್ಮಿಕರಿಗೆ ನೀಡಿ ಉದ್ಯೋಗ ಸೃಷ್ಟಿಹಾಗೂ ಸ್ವಚ್ಛನಗರ ಮಾಡಲು ಕೈ ಜೋಡಿಸಬೇಕು.ಅತಿಯಾದ ನೀರುಬಳಕೆಯಿಂದ ಮುಂದೆ ನೀರು ಸಿಗದಂತೆ ಪರಿಸ್ಥಿತಿ ನಿರ್ಮಾಣ
ಚರಂಡಿ ಸ್ವಚ್ಛತೆ. ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ಚಿಕನ್ ಗುನ್ಯಾ,ಮಲೇರಿಯಾ ಟೈಪಾಯಿಡ್ ಮಾರಕ ರೋಗಗಳು ಹರಡುವಿಕೆ ಶೌಚಾಲಯ ಬಳಕೆ ಇನ್ನು ಮುಂತಾದ ವಿಷಯಗಳು ಕುರಿತು ಕಲಾವಿದರು ಬೀದಿ ನಾಟಕ ಮಾಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಚೇತನ್
ನಾಯ್ಕ ಪರಿಸರ ಅಭಿಯಂತರರು.
ಹನುಮಂತ ಯಾದವ್ ಹಿರಿಯ ಆರೋಗ್ಯ ನಿರೀಕ್ಷಕರು,ಕಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮೀಪತಿ ಗೌಡರ, ಲಿಂಗರಾಜ,ವೆಂಕಟೇಶ ಹಾಗೂ ನೈರ್ಮಲ್ಯ ಮೇಲ್ವಿಚಾರಕರು, ಸಮುದಾಯ ಸಂಚಾಲಕರು ಸಂಕಲ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷರು ಪರುಶುರಾಮ್ ಬಾಗಲವಾಡ ಹಾಗೂ ನಗರ ಸಭೆ ಅಧಿಕಾರಿ ವರ್ಗ, ಮತ್ತು ಕಲಾವಿದ ರಾಜಪ್ಪಸಿರವಾರ, ಪ್ರಕಾಶ ವಿಜಯಪುರ, ಜ್ಯೋತಿ, ಶಿವಪ್ಪ,ನಾಗನಗೌಡ ಬಾಗೇಶ ಶರಣಯ್ಯ,ರೇಖಾ ಪೂಜಾರಿ ಹಾಗೂ ಸಿಂಧನೂರು ತಾಲೂಕು ಸುತ್ತ ಮುತ್ತ ಗ್ರಾಮಗಳ ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *