ರಾಯಚೂರು,ಫೆ.20-ಅಪಸ್ಮಾರ ಅಥವಾ ಮೂರ್ಛೆ ರೋಗದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವುದು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಬೀ ಕಾರ್ಯಕ್ರಮದ ನರರೋಗ ತಜ್ಞರು, -ಡಾ ನಾಗಭೂಷಣ ಹೆಸರೂರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ರಿಮ್ಸ್ ರಾಯಚೂರು ಇವರ ಮೂಲಕ ನಗರದ ಸಿಯಾತಲಾಬ್ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಮೂರ್ಛರೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,
ಮೂರ್ಛರೋಗದ ಬಗ್ಗೆ ಸಮಾಜದಲ್ಲಿರುವ ತಪ್ಪು ನಂಬಿಕೆ, ಕಳಂಕವನ್ನು ದೂರ ಮಾಡುವುದು ಇದರ ಉದ್ದೇಶವಾಗಿದೆ. ಅಪಸ್ಮಾರವು ಉಂಟಾಗಲು ಪಾರ್ಶ್ವವಾಯು, ಮೆದುಳಿನ ಗಡ್ಡೆ, ಮೆದುಳಿನ ಸೋಂಕು , ತಲೆಗೆ ಪೆಟ್ಟು, ಮೆದುಳಿಗೆ ಆಮ್ಲಜನಕದ ಕಡಿಮೆ ಪೂರೈಕೆ, ಕೆಲವು ಅನುವಂಶೀಯ ಅಸ್ವಸ್ಥತೆಗಳು, ಹಲವು ರೋಗಿಗಳಲ್ಲಿ ಅಪಸ್ಮಾರದ ನಿಖರವಾದ ಕಾರಣ ತಿಳಿದಿಲ್ಲ, ಅಲ್ಲದೆ ಇದು ಸಾಮಾಜಿಕವಾಗಿಯೂ ರೋಗಿಗಳ ಮೇಲ ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ಸುಮಾರು 50 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಸರಿಯಾದ ಔಷಧೋಪಚಾರ ಮತ್ತು ವೈದ್ಯಕೀಯ ಸಲಹೆಯಿಂದ ಶೇ.70 ರಷ್ಟು ಪ್ರಕರಣಗಳನ್ನು ನಿಯಂತ್ರಿಸಬಹುದು ಮೂಢನಂಬಿಕೆ ಅಪಸ್ಮಾರವು ಯಾವುದೇ ಶಾಪ ಅಥವಾ ದೈವಿಕ ಕೊಪವಲ್ಲ, ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದೆ, ಪ್ರಸ್ತುತ ರಿಮ್ಸ್ ಆಸ್ಪತ್ರೆಯ ‘ಬಿ’ ಬ್ಲಾಕ್‌ನ ಕೊಠಡಿ ಸಂಖ್ಯೆ 16 ರಲ್ಲಿ ಸೇವೆ ಲಭ್ಯವಿದೆ ಎಂದರು. ಶಾಲೆಯ ಮುಖ್ಯೊಪಾಧ್ಯಾಯರಾದ ವಿ.ಕೆ. ಜೋಶಿ ಅಧ್ಯಕ್ಷತೆ ವಹಿಸಿದ್ದರು.
*ಪ್ರತಿಜ್ಞೆ ಸ್ವೀಕಾರ:* ಮೂರ್ಛೆ ರೋಗ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಗುಂಡಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕಭೀ ಕಾರ್ಯಕ್ರಮ ಜಿಲ್ಲಾ ಸಂಯೋಜಕರು ರೋಹಿತ್‌ಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಅನಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಮನಶಾಸ್ತ್ರಜ್ಞ, ಅರುಣ್‌ಕುಮಾರ್ ಕುಲಕರ್ಣಿ, ಕಬಿ ಕಾರ್ಯಕ್ರಮದ ಪೋಲ್‌ರಾಜ್, ಅಲಿಮ್‌ಬೇಗ್, ಶಾಲೆಯ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.


