ಲಿಂಗಸಗೂರು : ಫೆ 21 ತಾಲೂಕು ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿ ಮತ್ತು ವಿವಿಧ ಇಲಾಖೆಗಳಲ್ಲಿ ಉದ್ಯೋಗ ಖಾತ್ರಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಭಾರಿ ಪ್ರಮಾಣದ ಭ್ರಷ್ಟಚಾರ ನಡೆಯುತ್ತಿರುವ ಆರೋಪಗಳು ಕುರಿತು ದಾಖಲೆ ಸಮೇತ ದೂರು ಸಲ್ಲಿಸುತ್ತಿದ್ದು ಲೆಕ್ಕ ಪರಿಶೋಧನ ವರದಿ ಆಧರಿಸಿ ಪ್ರಕರಣ ದಾಖಲಿಸಿ ಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ದ ಸಂ ಸ

(ನಾಗವಾರ ಬಣ) ದ ರಾಜ್ಯ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು

2005-06ರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಹಣ ದುಃ ದುರ್ಬಳಿಕೆ ತಡೆಯಲು ನಂತರದ ವರ್ಷಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಸಾಮಾಜಿಕ ಲೆಕ್ಕ ಪರಿಶೋಧನ ಸಮಿತಿ ರಚಿಸಲಾಗಿದೆ. ಆದರೆ, ಲೆಕ್ಕ ಪರಿಶೋಧನ ಸಮಿತಿ ಪ್ರತಿವರ್ಷ ಸಲ್ಲಿಸುವ ವರದಿಗಳನ್ನು ಆಧಾರಿಸಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಗ್ರಾಮ ಸಭೆಗಳಲ್ಲಿ ಕಾಮಗಾರಿಗಳ ಅನುಮೋದನೆ ಪಡೆಯದೆ, ಕ್ರೀಯಾ ಯೋಜನೆ ಇಲ್ಲದೆ ಕೆಲಸ ನಿರ್ವಹಿಸಿ ಎಂ.ಬಿ. (ಅಳತೆ ಪುಸ್ತಕ) ರೆಕಾರ್ಡ್ ಬರೆಯದೆ ಹಣ ಪಾವತಿ, ಸರ್ಕಾರಿ ನೌಕರರು ಮತ್ತು ಕೆಲಸಕ್ಕೆ ಹೋಗದವರ ಹೆಸರಿನಲ್ಲಿ ಕೂಲಿ ಪಾವತಿ, ಸಾಮಾಗ್ರಿ ಖರೀದಿ, ಬಿಲ್ ವ್ಯತ್ಯಾಸ, ನಕಲಿ ಬಿಲ್‌ಗಳು ಗುತ್ತಿಗೆದಾರರ ಮೂಲಕ ಅನುಷ್ಠಾನ, ನಿಗದಿತ ಸ್ಥಳದಲ್ಲಿ ಕೆಲಸ ಮಾಡದಿರುವುದು ಸೇರಿದಂತೆ ಹಣ ದುರ್ಬಳಿಕೆ ಮಾಡಿಕೊಂಡಿರುವ ಬಗ್ಗೆ ಲೆಕ್ಕ ಪರಿಶೋಧನೆ ಸಮತಿ ವರದಿ ಸಲ್ಲಿಸುತ್ತ ಬಂದಿದೆ.

ಲಿಂಗಸಗೂರು ತಾಲೂಕು ಆನೆಹೊಸೂರು ಗ್ರಾಮ ಪಂಚಾಯತಿಯಲ್ಲಿ 2019-20ರಲ್ಲಿ 63 ಕಾಮಗಾರಿಗಳಿಗೆ ಕೂಲಿ ಮತ್ತು ಸಾಮಾಗ್ರಿ ವೆಚ್ಚ ಎಂದು ರೂ.29,89,691 ವ್ಯಯ ಮಾಡಲಾಗಿದೆ. 2020-21ರಲ್ಲಿ ಗ್ರಾಮ ಸಭೆಯಲ್ಲಿ ಲೆಕ್ಕ ಪರಿಶೋಧನೆ ಸಮಿತಿ ಪರಿಶೀಲನೆ ನಡೆಸಿ ರೂ.80,945 ವಸೂಲಾತಿ ಹಾಗೂ ರಊ.27,28,872 ಹಣ ವಿವಿಧ ಕಾರಣಗಳಿಂದ ದುರ್ಬಳಿಕೆ ಆಗಿರುವ ಕುರಿತು ವರದಿ ಸಲ್ಲಿಸಿದ್ದರೂ ಕೂಡ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಿರಿಯ ಅಧಿಕಾರಿಗಳು ಶಾಮೀಲಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಇದೇ ರೀತಿ ಆನೆಹೊಸೂರು ಸೇರಿದಂತೆ ಗುಂತಗೋಳ, ನಾಗರಹಾಳ, ಗೊರೇಬಾಳ, ಕೈರವಾಡಗಿ, ಬಯ್ಯಾಪುರ, ಮಾವಿನಭಾವಿ, ಕೋಠಾ, ಬನ್ನಿಗೋಳ, ಹೊನ್ನಹಳ್ಳಿ, ಗೌಡೂರು, ಹಲ್ಕಾವಟಗಿ, ದೇವರಭೂಪೂರು, ರೋಡಲಬಂಡ (ತವಗ), ನೀರಲಕೇರಿ, ಕಾಚಾಪುರ, ಆನ್ವರಿ, ಸರ್ಜಾಪುರ, ಚಿತ್ತಾಪುರ, ಉಪ್ಪಾರನಂದಿಹಾಳ ಸೇರಿದಂತೆ ಇತರೆ ಪಂಚಾಯತಿಗಳಲ್ಲಿ ಕೋಟ್ಯಾಂತರ ಹಣ ದುರ್ಬಳಿಕೆ ಮಾಡಿರುವ ವರದಿಗಳು ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಧೂಳು ತಿನ್ನುತ್ತಿವೆ.

2019-20ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಮೇಲ್ಕಾಣಿಸಿದ ಗ್ರಾಮ ಪಂಚಾಯತಿಗಳಲ್ಲಿ 3964 ಕಾಮಗಾರಿಗೆ ಕೂಲಿ ಮತ್ತು ಸಾಮಾಗ್ರಿ ಖರೀದಿಗೆ ರೂ.31 ಕೋಟಿ ಹಣ ಖರ್ಚು ಹಾಕಲಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ವಿವಿಧ ಕಾರಣಗಳಿಂದ ವಸೂಲಾತಿಗೆ ರೂ.13.43 ಲಕ್ಷ ಹಾಗೂ ವಿವಿಧ ಕಾರಣಗಳಿಂದ ಅಪೂರ್ಣ ಮತ್ತು ಆಕ್ಷೇಪಾರ್ಹ ಕಾಮಗಾರಿ ಹಣ ರೂ.11.93 ಕೋಟಿ ಸೇರಿದಂತೆ ಒಟ್ಟು ರೂ.12.07 ಕೋಟಿ ಹಣ ದುರ್ಬಳಿಕೆ ಮಾಡಿಕೊಂಡ ಬಗ್ಗೆ ವರದಿಗಳು ಸಲ್ಲಿಕೆಯಾಗಿರುವುದು ಸದ್ಯ ಪ್ರಕರಣ ದಾಖಲಿಸಲು ನಿರ್ದಶನವಾಗಿದೆ. ಅದೇ ರೀತಿ 2021-22ರ ಕಾಮಗಾರಿ ರೂ.30.60 ಕೋಟಿಯಲ್ಲಿ ರೂ.10.18 ಕೋಟಿ ಹಣ ದುರ್ಬಳಿಕೆ ಆಗಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಈ ರೀತಿಯಾಗಿ ಹಲವು ವರ್ಷಗಳಿಂದ ಸಾಮಾಜಿಕ ಲೆಕ್ಕ ಪರಿಶೋಧನೆ ಸಮಿತಿ ಸಾರ್ವಜನಿಕ ಸಭೆ ಆಯೋಜಿಸಿ ಜನರ ಮಧ್ಯೆ ಲೆಕ್ಕಪತ್ರ ಪರಿಶೀಲನೆ ನಡೆಸುತ್ತದೆ.ಸಾರ್ವಜನಿಕರ ಆಕ್ಷೇಪಣೆ, ಕಾಮಗಾರಿ ಸ್ಥಳ ಮತ್ತು ಕಡತಗಳ ಪರಿಶೀಲನೆ ಆಧರಿಸಿ ವಸೂಲಿ ಮಾಡಬಹುದಾದ ಹಣ ಮತ್ತು ಅಪೂರ್ಣ ಕಾಮಗಾರಿಗೆ ಬಳಸಿದ ಹಣ ಕುರಿತು ವರದಿ ಸಲ್ಲಿಸುತ್ತ ಬಂದಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳದೆ ಅಧಿಕಾರಿಗಳು ತಾಲೂಕು ಆಡಾಕ್ ಕಮೀಟಿ ಎಂಬ ಹೆಸರಲ್ಲಿ ಇಡೀ ಪ್ರಕಣರ ಮುಚ್ಚಿ ಹಾಕುತ್ತ ಬಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾರಣ 2019-20ರ ಲೆಕ್ಕ ಪರಿಶೋಧನೆ ವರದಿ ಆಧಾರ ಇಟ್ಟುಕೊಂಡು ಪ್ರಕರಣ ದಾಖಲಿಸಿ, 2010-ರಿಂದ ಈ ವರೆಗಿನ ಲೆಕ್ಕ ಪರಿಶೋಧನೆ ವರದಿ ಪರಿಶೀಲನೆ ನಡೆಸಬೇಕು. ವರದಿ ಅಂಶಗಳನ್ನು ಮುಂದಿಟ್ಟ ತಾಲೂಕು ಆಡಾಕ ಕಮಿಟಿ ಹೆಸರಲ್ಲಿ ನಡೆಸಿರುವ ಭ್ರಷ್ಟಾಚಾರದ ತನಿಖೆ ನಡೆಸಬೇಕು. ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಕಡತಗಳು ಧೂಳು ಜಾಡಿಸಿ ಕೋಟ್ಯಾಂತರ ಹಣ ದುರ್ಬಳಿಕೆ ಮಾಡಿಕೊಂಡಿರುವ ಆರೋಪಿತರನ್ನು ಬಂಧಿಸಿ, ದುರ್ಬಳಿಕೆ ಹಣವನ್ನು ಮರುಪಾವತಿಸಿ ಕೊಳ್ಳುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಕ್ರಂಪಾಷ ,

ಯಲ್ಲಪ್ಪ ಹಾಲಬಾವಿ , ನಾಗರಾಜ.ಹೆಚ್. ಪರಶುರಾಮ್ ಗುಡಿಜಾವೂರು , ದುರಗಪ್ಪ , ಖಾಸಿಂಸಾಬ ಶಣ್ಣುಖರೆಡ್ಡಿ , ಹನುಮೇಶ ಕುಪ್ಪಿಗುಡ್ಡ , ಹುಸೇನಪ್ಪ ನಾಯಕ, ಮಾಳಪ್ಪಗೌಡ ಸೇರಿದಂತೆ ಇದ್ದರು .

Leave a Reply

Your email address will not be published. Required fields are marked *