ಸಿಂಧನೂರು : ಕಲಿಕಾ ಹಬ್ಬ – ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯ ಆಂದೋಲನ ಶಾಲಾ ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಿಂಧನೂರು ಸಮೂಹ ಸಂಪನ್ಮೂಲ ಕೇಂದ್ರ (ಬಿ.ಬಿ.ಪಿ. ಕ್ಯಾಂಪ್) ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುಸಿದ್ದಯ್ಯನಮಠ ಇವರ ಸಹಯೋಗದಲ್ಲಿ,

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಸಿದ್ದಯ್ಯನಮಠ, ಉಪ್ಪಾರವಾಡಿ ವಾರ್ಡ್ ನಂ–5, ಸಿಂಧನೂರಿನಲ್ಲಿ *“ಕಲಿಕಾ ಹಬ್ಬ”*ವನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು.
. ಮಕ್ಕಳು ಕುಂಭ, ಡೊಳ್ಳು ಕುಣಿತ, ಕೋಲಾಟ ನೃತ್ಯದೊಂದಿಗೆ ವಾರ್ಡ ನಂ-05 ರ ಆರಾಧ್ಯ ದೈವ ಶ್ರೀ ಲಕ್ಷ್ಮೀ ವೆಂಕಟರಮಣ ಗುಡಿಯಿಂದ ಶಾಲೆಯವರೆಗೆ ಮೆರವಣಿಗೆ ಮಾಡಲಾಯಿತು. ಪ್ರಾಸ್ತವಿಕವಾಗಿ ವಲಯದ ಸಿಆರ್ ಪಿ ಗಳಾದ ಚನ್ನನಗೌಡ ಮಾತನಾಡಿದರು. ಕಲಿಕಾ ಹಬ್ಬದ ಉದ್ಘಾಟನೆಯನ್ನು ಸೋಮಲಿಂಗಪ್ಪ ದೈಹಿಕ ಶಿಕ್ಷಣಾಧಿಕಾರಿಗಳು ನೆರವೇರಿಸಿ ಮಾತನಾಡಿ ಕಲಿಕಾ ಹಬ್ಬ ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ಒಂದು ವೇದಿಕೆಯಾಘಿದೆ. ಶಾಲೆಯಲ್ಲಿ ಈ ಹಬ್ಬ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುತ್ತದೆ ಎಂದರು. ನಂತರ BRPಗಳಾದ ಬಸವರಾಜ ಆನೆಗುಂದಿಯವರು ಮಾತನಾಡಿದರು. ನಂತರ ಶಿಕ್ಷಣ ಸಂಯೋಜಕರಾದ ಕುಮಾರಸ್ವಾಮಿ ಹಿರೇಮಠ ಮಾತನಾಡಿದರು . ಮುಖ್ಯ಻ತಿಥಿಗಳಾಗಿ ಆಗಮಿಸಿದ ನಗರಸಭೆ ಸದಸ್ಯರಾದ ಹನುಮೇಶ ಕೆ ಇವರು ಮಾತನಾಡಿ ಕಲಿಕಾ ಹಬ್ಬ ಈ ಶಾಲೆಯಲ್ಲಿ ಒಂದು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿದೆ.ಮಕ್ಕಳು ಕಲಿಕಾ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೆಪಿಸಬೇಕು ಎಂದು ಹೇಳಿ ನಮ್ಮ ಈ ಶಾಳೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ FLN- ಕಲಿಕಾ ಹಬ್ಬದಲ್ಲಿ 8 ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಶಾಲೆಗಳಿಂದ ನಿರ್ಣಾಯಕರಾಗಿ ಶಿಕ್ಷಕರು ಭಾಗವಹಿಸಿದ್ದರು. ಕಲಿಕಾ ಹಬ್ಬದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಶೇಷವಾಗಿ FLN –ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಬೇರೆ ಬೇರೆ ಶಾಲೆಯಿಂದ ಬಂದಂತಹ ವಿದ್ಯಾರ್ಥಿಗಳು ಶಿಕ್ಷಕರು ಪೋಷಕರು ಮಕ್ಕಳು ಮನೆಯಿಂದ ತಯಾರಿಸಿಕೊಂಡು ಬಂದಂತಹ ಬಗೆಬಗೆಯ ಆಹಾರ ಖಾದ್ಯಗಳನ್ನು ಖರೀದಿಸಿ ರುಚಿ ನೋಡಿದರು. ಮಕ್ಕಳು ತುಂಬಾ ಸಂತೋಷಪಟ್ಟರು.
ಈ ಕಾರ್ಯಕ್ರಮವು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯ (FLN) ಆಂದೋಲನದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಓದು, ಬರಹ ಹಾಗೂ ಮೂಲಭೂತ ಗಣಿತ ಕೌಶಲ್ಯಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಯಿತು. ಕಲಿಕೆಯನ್ನು ಕೇವಲ ಪಾಠಪುಸ್ತಕಗಳಲ್ಲೇ ಸೀಮಿತಗೊಳಿಸದೆ, ಆಟ-ಪಾಟ, ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಆನಂದದಾಯಕವಾಗಿ ತಲುಪಿಸುವ ಪ್ರಯತ್ನ ಮಾಡಲಾಯಿತು.
ವಿದ್ಯಾರ್ಥಿಗಳಿಂದ ನಡೆದ ಪ್ರಮುಖ ಚಟುವಟಿಕೆಗಳು:
📚 ರಸಪ್ರಶ್ನೆ ಸ್ಪರ್ಧೆ
🥗 ಆಹಾರ ಮತ್ತು ಪೌಷ್ಠಿಕಾಂಶ ಕುರಿತ ಜಾಗೃತಿ ಕಾರ್ಯಕ್ರಮ
🧠 ಮೆಮೊರಿ ಪರೀಕ್ಷೆ
📖 ಕಥೆ ಹೇಳುವಿಕೆ
✍ ಕೈಬರಹ ಮತ್ತು ಕ್ಯಾಲಿಗ್ರಫಿ ಸ್ಪರ್ಧೆ
➗ ಸಂತೋಷದಾಯಕ ಗಣಿತ ಚಟುವಟಿಕೆಗಳು
👨👩👧 ಪೋಷಕರು–ಮಕ್ಕಳ ಸಹಸಂಬಂಧ ಕಾರ್ಯಕ್ರಮ
🎭 ಛದ್ಮವೇಶ ಸ್ಪರ್ಧೆ
ಈ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ವೇದಿಕೆ ಧೈರ್ಯ, ತಂಡದ ಮನೋಭಾವ ಹಾಗೂ ಸೃಜನಾತ್ಮಕತೆ ಹೆಚ್ಚುವಂತೆ ಪ್ರೇರಣೆ ನೀಡಲಾಯಿತು. ವಿಶೇಷವಾಗಿ ಪೋಷಕರು ಮಕ್ಕಳೊಂದಿಗೆ ಸೇರಿ ಭಾಗವಹಿಸಿರುವುದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದ ಅಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿರಂತರ ಸಹಕಾರ ನೀಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
“ಕಲಿಕಾ ಹಬ್ಬ”ವು ಶಾಲಾ ವಾತಾವರಣವನ್ನು ಹಬ್ಬದಂತೆಯೇ ರೂಪಿಸಿ, ಕಲಿಕೆಯನ್ನು ಸಂತೋಷದಾಯಕ ಅನುಭವವಾಗಿಸಲು ಮಾಡಿದ ಮಹತ್ವದ ಪ್ರಯತ್ನವಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಹುಲುಗಪ್ಪ. BRPಗಳಾದ ಮೈನುದ್ದೀನ್ , ನಾಗಪ್ಪ, ಮಂಜುನಾಥ ಹಿರೇಮಠ CRP ಗಳಾದ ಗುರುಸ್ವಾಮಿ, ಪ್ರಮೋದ, ಹನುಂತ ಷಣ್ಮುಖಗೌಡ,ರಾಘವೇಂದ್ರ, ಮಹಾವೀರ ಇತರರು ಇದ್ದರು.
ವಾರ್ಡ್ ನಂ-05 ರ ಶಿಕ್ಷಣ ಪ್ರೇಮಿಗಳಾದ  ನಾಗರಾಜ ದೇವರ ಗುಡಿ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಬಸವರಾಜ್, ರಾಮಕೃಷ್ಣ ಉಪ್ಪಾರ, ಶ್ರೀನಿವಾಸ ಕುಡಿತಿನಿ,ಶಾಲೆಯ SDMC ಅಧ್ಯಕ್ಷರಾದ ಹುಲಿಗೆಮ್ಮ ಮತ್ತು ಸದಸ್ಯರು ಇದ್ದರು.ಶಾಲೆಯ ಶಿಕ್ಷಕರು ಅಡುಗೆ ಸಿಬ್ಬಂದಿಯವರು, ವಾರ್ಡ್ ನಂ 05ರ ಸದಸ್ಯರು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ  ಮಾನಮ್ಮ ನಾಯಕ, ಶಿಕ್ಷಕರು ಪತ್ತಿನ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಮೊದಲಾದವರು ಇದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ತಿಮ್ಮಪ್ಪ ದೇಸಾಯಿ ಶಿಕ್ಷಕರು ನೇರವೇರಿಸಿದರು. ಸಾವಿತ್ರಿ ದೀಕ್ಷತ್ ಇವರು ನಾಡಗೀತೆ ಹಾಗೂ ಸ್ವಾಗತ ಭಾಷಣ ಮಾಡಿದರು . ಕೊನದಾಗಿ ಮುಖ್ಯಗುರುಗಳಾದ ಗಿರೀಶ್ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

Leave a Reply

Your email address will not be published. Required fields are marked *