ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ 2025-2026ನೇ ಸಾಲಿನ 15ನೇ ಹಣಕಾಸಿನ ನೆರವು ಬಿಡುಗಡೆಯಾಗಿಲ್ಲವೆಂದು ಆಡಳಿತ ನಡೆಸುತ್ತಿರುವ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಆರೋಪಿಸಿದ್ದಾರೆ. ದಿನಾಂಕ 20-02-2026 ರಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷರಾದ ವಿಜಯಲಕ್ಷ್ಮಿ ವೆಂಕೋಬ ತೋಟ ಅವರು, “ಕರ್ನಾಟಕ ಸರ್ಕಾರದಿಂದ ಬರಬೇಕಾದ 15ನೇ ಹಣಕಾಸಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಜೊತೆಗೆ ಈ ವರ್ಷದ BOC ಕೂಲಿಕಾರರ ಕೆಲಸ ಹಾಗೂ ಸಾಮಗ್ರಿ ವೆಚ್ಚದ ಅಂದಾಜು 8 ಕೋಟಿ 80 ಲಕ್ಷ ರೂಪಾಯಿ ಬಿಡುಗಡೆಯಾಗದೆ ಇರುವುದರಿಂದ ಪಂಚಾಯತ್ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ” ಎಂದು ಆರೋಪಿಸಿದರು.
, “ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ ನಿರ್ಲಕ್ಷದಿಂದ ಅನುದಾನ ವಿಳಂಬವಾಗುತ್ತಿದೆ. ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ” ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಶ ಅವರು, “ದೊಡ್ಡ ಪಂಚಾಯತ್ ಆಗಿರುವ ಜಾಲಹಳ್ಳಿಯಲ್ಲಿ ಪ್ರಸ್ತುತ ನಿಧಿ-1 ಹಾಗೂ ನಿಧಿ-2 ಮೂಲಕ ಮಾತ್ರ ಕಾರ್ಯ ನಡೆಯುತ್ತಿದೆ. ಸಿಬ್ಬಂದಿಗಳ ವೇತನಕ್ಕೂ ತೊಂದರೆ ಉಂಟಾಗಿದೆ. ರೈತರ ಹೊಲಗಳ ನಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಮನರೇಗಾ ಹೆಸರಿನಲ್ಲಿ ವಿಳಂಬ ಮಾಡಲಾಗುತ್ತಿದೆ” ಎಂದು ದೂರಿದರು.
ಸದಸ್ಯರಾದ ಬಸವರಾಜ್ ಗೋಪಾಲಪುರ ಅವರು, “ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರನ್ನು ಬದಲಾವಣೆ ಮಾಡುವಂತೆ ರಾಯಚೂರು ಜಿಲ್ಲಾ ಪಂಚಾಯತ್ ಮತ್ತು ದೇವದುರ್ಗ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
ಇದಲ್ಲದೆ, ರಾಜ್ಯ ಹೆದ್ದಾರಿಯಲ್ಲಿ ಹಂಪ್ಸ್ ಹಾಕುವ ಕುರಿತು ತರಾವು ಪಾಸ್ ಮಾಡಿದರೂ Public Works Department ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಅವರು ಆಕ್ಷೇಪಿಸಿದರು.
ಮಾರ್ಚ್ ತಿಂಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿರೈತರ ಹೊಲಗಳ ನಾಲಾ ಅಭಿವೃದ್ಧಿ ಈ ವರ್ಷದ BOC ಕೂಲಿಕಾರರ ಕೆಲಸ ಹಾಗೂ ಸಾಮಗ್ರಿಕಾಮಗಾರಿಗಳಿಗೆ ಮನರೇಗಾ ಪ್ರಸ್ತುತ ಸಾಲಿನ ಹಣ ಬಿಡುಗಡೆ ಮಾಡದಿದ್ದರೆ ಅಂದಾಜು 8.80 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಜಾಲಹಳ್ಳಿ ಗ್ರಾಮ ಪಂಚಾಯತಿನ ಪ್ರಸ್ತುತ ವರ್ಷದ 15ನೇ ಹಣಕಾಸು ಹಾಗೂ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ವಿಜಯಲಕ್ಷ್ಮಿ ವೆಂಕೋಬ ತೋಟ, ಉಪಾಧ್ಯಕ್ಷ ವೀರೇಶ್ ಅರ್ಕೇರಿ ಹಾಗೂ ಸದಸ್ಯರಾದ ಮಲ್ಲಪ್ಪ ಸೌದ್ರಿ, ಸರ್ಬಣ್ಣ ಹಂಪರಗುಂದಿ, ಬಸವರಾಜ್ ಗೋಪಾಲಪುರ ಮತ್ತು ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.
ವರದಿ: ಖಾಜಾಹುಸೇನ್ ಬಾಬಾ, ಜಾಲಹಳ್ಳಿ

