ಕೇಂದ್ರ ಸರ್ಕಾರದಿಂದ ತಾ.ಪಂ.ಮತ್ತು ಜಿ.ಪಂ.ಗಳ 15ನೇ ಹಣಕಾಸಿನ ಅನುದಾನ 5 ಸಾವಿರ ಕೋಟಿ ಬರದಿರುವುದಕ್ಕೆ ನೇರ ಹೊಣೆಗಾರಿಕೆ ನಿಗದಿತ ಸಮಯದಲ್ಲಿ ಚುಣಾವಣೆ ನಡಸದಿರುವುದೇ ಕಾರಣ ಎಂದು ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯತಿ ಮುಂದೆಯೇ ಗ್ರಾಮ ಸ್ವರಾಜ್ಯ ಕರ್ನಾಟಕ ವೇದಿಕೆ ಸಿಂಧನೂರು, ವಿರುಪಾಪುರ ಗ್ರಾಮ ಪಂಚಾಯತಿ ಸರ್ವ ಮಾಜಿ ಸದಸ್ಯರು, ಗ್ರಾಮಸ್ಥರು, ಮಹಿಳೆಯರು, ಯುವಕರು, ಸೇರಿ ಪ್ರತಿಭಟನೆ ನಡೆಸಿದರು.
ಫೆ.19 ಗುರುವಾರದಂದು ಪ್ರತಿಭಟನೆ ನಡೆಸಿ,
ಶಾಸಕ ಕೇಂದ್ರಿತ ಆಡಳಿತಕ್ಕೆ ಸಜ್ಜಾದ ಸರ್ಕಾರ.
ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ನಡೆಸದೆ 5 ವರ್ಷ ಕಳೆದಿದೆ. ಗ್ರಾಮ ಪಂಚಾಯತಿ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳ ನೇಮಕ ಮಾಡಿದ ಸರ್ಕಾರ, ಮೂರು ಹಂತದ ಪಂಚಾಯತ ಚುನಾವಣೆಗಳನ್ನು ಮುಂದೂಡಿ ಆಡಳಿತಾಧಿಕಾರಿ ನೇಮಿಸಿ, ಮಹಿಳೆಯರಿಗೆ, ಪ.ಜಾತಿ ಮತ್ತು ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರದಿಂದ ದೂರವಿಡುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ.
ಗ್ರಾ.ಪಂ.ಗಳಿಗೆ ಬರಬೇಕಾದ 15ನೇ ಹಣಕಾಸು ರಾಜ್ಯದ ಪಾಲು 2,100 ಕೋಟಿಯಲ್ಲಿ ನಯಾ ಪೈಸೆಯೂ ಸಹ ಬಿಡುಗಡೆಯಾಗಿಲ್ಲ. ನರೇಗಾ ಯೋಜನೆ ಅಡಿಯಲ್ಲಿ ನಿಯಮಾನುಸಾರ ಮಾಡಿದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಸಾಮಗ್ರಿ ಮೊತ್ತ ಬಿಡುಗಡೆ ಆಗಿಲ್ಲ ಇದಕ್ಕೆಲ್ಲ ಹೋಣೆಯಾರು?
ಎಂದು ತೀವ್ರವಾಗಿ ಖಂಡಿಸಿದರು.

ಈ ವೇಳೆ: ರವಿಗೌಡ ಮಲ್ಲದಗುಡ್ಡ, ಲಕ್ಷ್ಮಿಬುಡ್ಡಪ್ಪ, ಗಂಗಮ್ಮ ಈರಪ್ಪ, ಸಿದ್ದಪ್ಪ ಬೇವಿನಗಿಡ, ಬಸವರಾಜ ಕವಳೆಕಾಯಿ, ಶಾಮೀಲಪ್ಪ, ಪಂಪಯ್ಯಸ್ವಾಮಿ, ಮಲ್ಲರೆಡ್ಡಿ, ದುರುಗಪ್ಪ, ಹನುಮಂತ, ಸೇರಿದಂತೆ ಗ್ರಾಮಸ್ಥರು ಇದ್ದರು.
