ಮಸ್ಕಿ ಫೆ. 19 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೆ,ಎಂ,ಎಫ್), ಸಹಕಾರ ಇಲಾಖೆ, ಯಶಸ್ವಿನಿ ಟ್ರಸ್ಟ್, ಸಿಂಧನೂರು ಉಪವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ “ಸಿಂಧನೂರು ಉಪವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ವಿವಿಧ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ ಯಶಸ್ವಿನಿ ಆರೋಗ್ಯ ಯೋಜನೆ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಕ್ರಮ”ವನ್ನು ಪಟ್ಟಣದ ಗಚ್ಚಿನ ಮಠ, ಕೇಂದ್ರ ಶಾಲೆ ಹತ್ತಿರ, ಮಸ್ಕಿಯಲ್ಲಿ ಜರುಗಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಾಗಭೂಷಣ ಬಾರಕೇರ್ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಮಸ್ಕಿ ಇವರು ನೆರವೇರಿಸಿ ಶುಭ ಕೋರಿ ಮಾತನಾಡಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳು ಜವಾಬ್ದಾರಿಯಿಂದ ಯಶಸ್ವಿನಿ ಫಲಾನುಭವಿಗಳ ಆನ್ ಲೈನ್ ನೋಂದಣಿ ಕಾರ್ಯವನ್ನು ಮಾಡುವಂತೆ ತಿಳಿಸಿ ಜಿಲ್ಲಾ ಸಹಕಾರ ಒಕ್ಕೂಟದಿಂದ ಜರುಗಿಸುವ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಂದ್ರಶೇಖರ್ ಗೂಗೇಬಾಳ ನಿರ್ದೇಶಕರು ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಇವರು ಮಾತನಾಡಿ ಜಿಲ್ಲಾ ಸಹಕಾರ ಒಕ್ಕೂಟದಿಂದ ಜರುಗುವ ವಿವಿಧ ತರಬೇತಿಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ತರಬೇತಿಯಲ್ಲಿ ಭಾಗವಹಿಸಿ, ನೀಡುವ ಮಾಹಿತಿಯನ್ನು ತಮ್ಮ ಸಂಘದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅತಿಥಿ ಉಪನ್ಯಾಸಕರಾದ ಪ್ರವೀಣಕುಮಾರ ಸಮನ್ವಯಾಧಿಕಾರಿಗಳು ಯಶಸ್ವಿನಿ ಟ್ರಸ್ಟ್ ಅವರು ಯಶಸ್ವಿನಿ ಆರೋಗ್ಯ ಯೋಜನೆಯ ನೋಂದಣಿ, ಯೋಜನೆಯ ಮಹತ್ವ ಮತ್ತು ಯೋಜನೆಯಡಿ ದೊರೆಯುವ ವಿಶೇಷ ಸೌಲಭ್ಯಗಳು ಮತ್ತು ಆನ್ ಲೈನ್ ಎಂಟ್ರಿ ಕುರಿತು ಮಾಹಿತಿ ನೀಡಿದರು.
ಇನ್ನೋರ್ವ ಉಪನ್ಯಾಸಕರಾದ ವೀರೇಶ್ ಹಿರೇಮಠ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೃಮರಾಂಭ ಪತ್ತಿನ ಸೌಹಾರ್ಧ ಸಹಕಾರ ಸಂಘ ಮಸ್ಕಿ ಇವರು ಸೈಬರ್ ಅಪರಾಧಗಳು, ನಿಯಂತ್ರಣ ಮತ್ತು ಮುನ್ನಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಘನಮಠದಯ್ಯ ಸಲಹೆಗಾರರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಜಿಲ್ಲಾ ಒಕ್ಕೂಟ ಇವರು ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮುಖ್ಯತಿಥಿಗಳಾಗಿ, ಎಂ. ಸತ್ಯನಾರಾಯಣ ಪ್ರಭಾರ ವ್ಯವಸ್ಥಾಫಕರು ಕೆ.ಎಫ್. ಸಿಂಧನೂರು, ಗಂಗಾಧರ ಸಿ.ಡಿ.ಒ. ಲಿಂಗಸೂಗೂರು, ಮುದಸಿರ್ ಸಿ.ಡಿ.ಒ. ಮಸ್ಕಿ, ಹೀರೋಜಿ ಸಿ.ಡಿ.ಒ. ಸಿಂಧನೂರು, ನಾಗಪ್ಪ ವಿಸ್ತೀರ್ಣಾಧಿಕಾರಿ ಕೆ.ಎಂ.ಎಫ್. ಲಿಂಗಸೂಗೂರು, ಶಿವರಾಜ್ ನೀರೀಕ್ಷಕರು, ಎ.ಆರ್.ಸಿ.ಎಸ್. ಕಛೇರಿ ಸಿಂಧನೂರು ಹಾಗೂ ಮಂಜುನಾಥ ಜಿ. ವ್ಯವಸ್ಥಾಪಕರು ಬಿ.ಎಂ.ಸಿ. ಕೇಂದ್ರ ಮುದಗಲ್ ಮುಂತಾದವರು ಉಪಸ್ಥಿತರಿದ್ದರು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲಾ ಸಹಕಾರ ಒಕ್ಕೂಟದ ಜಿಲ್ಲಾ ಸಹಕಾರ ಶಿಕ್ಷಕರಾದ ಮಂಜುಳಾ ಸ್ವಾಗತಿಸಿದರು. ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ವೈ. ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ಶಿಕ್ಷಕರಾದ ಕು|| ಅಶ್ವಿನಿ ಕೆ. ನಿರೂಪಿಸಿದರೆ ಒಕ್ಕೂಟದ ವ್ಯವಸ್ಥಾಪಕ ಮಲ್ಲಿಕಾರ್ಜುನ ಎಂ. ಅಮ್ಮಿನಭಾವಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಿಂಧನೂರು ಉಪವಿಭಾಗದ (ಸಿಂಧನೂರು, ಲಿಂಗಸಗೂರು ಹಾಗೂ ಮಸ್ಕಿ ತಾಲೂಕುಗಳ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಎಲ್ಲಾ ವಿವಿಧ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ”


