ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಿಂದ 2024-25ನೇ ಸಾಲಿನ ಜಿಲ್ಲಾ ಅಂಕಿ ಅಂಶ ನೋಟದ ಪುಸ್ತಕಗಳು ಹಾಗೂ ಆರ್ಥಿಕ & ಸಾಮಾಜಿಕ ಅವಲೋಕನ ಪುಸ್ತಕಗಳ ಮುದ್ರಿಸಲು ಕನಿಷ್ಠ ದರಪಟ್ಟಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಯಚೂರು ಜಿಲ್ಲೆಯ ಅಂಕಿ ಅಂಶಗಳ ನೋಟದ ಪುಸ್ತಕಗಳು ಹಾಗೂ ಆರ್ಥಿಕ & ಸಾಮಾಜಿಕ ಅವಲೋಕನ ಪುಸ್ತಕಗಳ ಮುದ್ರಿಸುವ ಕರಡು ಪ್ರತಿ ತಯಾರಾಗಿದ್ದು, ಅವುಗಳನ್ನು ಯಾವುದೇ ಅಕ್ಷರದೋಷ, ವ್ಯಾಕರಣ ದೋಷಗಳು ಇರದಂತೆ ಜಿಲ್ಲೆಯ ಅಂಕಿ ಅಂಶಗಳ ನೋಟದ ಪುಸ್ತಕದ ಮುಂಭಾಗ ಮತ್ತು ಹಿಂಭಾಗದ 2 ಪುಟಗಳು ಹಾಗೂ 40 ನಕ್ಷೆಗಳ ಒಳಪುಟಗಳು ಬಣ್ಣಗಳಿಂದ ಮುದ್ರಿತವಾಗಬೇಕು ಹಾಗೂ 60 ಪುಟಗಳ ಆರ್ಥಿಕ & ಸಾಮಾಜಿಕ ಅವಲೋಕನ ಪುಸ್ತಕವನ್ನು (ಮುಂಭಾಗ ಮತ್ತು ಹಿಂಭಾಗದ 2 ಬಣ್ಣದ ಪುಟಗಳು) ಅಂದವಾಗಿ ಮುದ್ರಿಸಿ ಕೊಡಬೇಕಾಗಿದೆ.
ರಾಯಚೂರು ಜಿಲ್ಲೆಯ ಅಂಕಿ ಅಂಶಗಳ ನೋಟದ ಪುಸ್ತಕದ 500 ಪುಸ್ತಕಗಳನ್ನು & ಆರ್ಥಿಕ & ಸಾಮಾಜಿಕ ಅವಲೋಕನ 200 ಪುಸ್ತಕಗಳನ್ನು ಮುದ್ರಣ ಮಾಡುವುದಕ್ಕಾಗಿ ದರಪಟ್ಟಿಯನ್ನು ಮೂರು ಲಕ್ಷ ರೂಪಾಯಿಗಳಿಗೆ ಕರೆಯಲಾಗಿದೆ. ಇಚ್ಛೆಯುಳ್ಳ ಮುದ್ರಣಾಲಯದವರು ಈ ದರಪಟ್ಟಿಗಳನ್ನು ಪ್ರಕಟವಾದ ದಿನಾಂಕದಿAದ ಒಂದು ವಾರದೊಳಗಾಗಿ ಅಂದರೆ ದಿನಾಂಕ:10-02-2026 ರಿಂದ ದಿನಾಂಕ:18.02.2026 ರ ಸಂಜೆ 5.30 ಗಂಟೆಯೊಳಗಾಗಿ ಈ ಕಾರ್ಯಾಲಯಕ್ಕೆ ಪುಸ್ತಕ ಒಂದಕ್ಕೆ ತಗಲುವ ದರವನ್ನು ನಮೂದಿಸಿ ಕನಿಷ್ಠ ದರಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತ್ತಕ್ಕದ್ದು ಮತ್ತು ಈ ಕಛೇರಿಗೆ ಸ್ವೀಕೃತಿಯಾದ ದರಪಟ್ಟಿಗಳನ್ನು ದಿನಾಂಕ: 19.02.2026 ರ ಬೆಳಿಗ್ಗೆ 11ಗಂಟೆಗೆ ಈ ಕಚೇರಿಯಲ್ಲಿ ತೆರೆಯಲಾಗುವುದು ಕಾರಣ ದರಪಟ್ಟಿಗಳನ್ನು ಸಲ್ಲಿಸಿದವರು ಈ ಪತ್ರದಲ್ಲಿ ತಿಳಿಸಿದ ವೇಳೆಯಲ್ಲಿ ಹಾಜರಾಗಬೇಕು. ಅತೀ ಕಡಿಮೆ ದರಪಟ್ಟಿ ಸಲ್ಲಿಸುವ ಮುದ್ರಣಾಕಾರರು  ಆದೇಶ ನೀಡಿದ 07 ದಿವಸದೊಳಗಾಗಿ ಯಾವುದೇ ದೋಷವಿಲ್ಲದಂತೆ ಪರಿಶೀಲಿಸಿ, ಪ್ರಕಟಣೆಯಲ್ಲಿ ತಿಳಿಸಿದ ನಿಬಂಧನೆಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ಮುದ್ರಿಸಿ ಕೊಡತಕ್ಕದ್ದು ಹಾಗೂ ಒಟ್ಟು ಬಿಲ್ಲಿನ ಮೊತ್ತದಲ್ಲಿ ಶೇ.2 ಟಿಡಿಎಸ್‌ನ್ನು ಕಟಾಯಿಸಿ ಹಣವನ್ನು ಪಾವತಿಸಲಾಗುವುದು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *