ತಾಳಿಕೋಟಿ: ಪಟ್ಟಣದಲ್ಲಿ ಫೆಬ್ರವರಿ 15ರಂದು ನಡೆಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ ನೂತನ ಸಭಾ ಭವನ ಉದ್ಘಾಟನೆ ಹಾಗೂ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಅನುಭವ ಮಂಟಪದ ಶಂಕುಸ್ಥಾಪನೆ ಕಾರ್ಯಕ್ರಮದ ಪೋಸ್ಟರನ್ನು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಬಿಡುಗಡೆಗೊಳಿಸಿದರು. ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸಮಾಜದ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಫೆಬ್ರವರಿ 15ರಂದು ಪಟ್ಟಣದಲ್ಲಿ ಶ್ರೀ ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು ಸಂತೋಷದ ವಿಷಯ ಇದರಲ್ಲಿ ನಾನೂ ಭಾಗವಹಿಸುತ್ತೇನೆ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಿ ಎಂದರು. ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ತಂಗಡಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ತಾಲೂಕ ಅಧ್ಯಕ್ಷ ಮಡು ಸಾಹುಕಾರ ಬಿರಾದಾರ, ಅಂಬಿಗರ ಸಮಾಜದ ಪ್ರಮುಖರಾದ ಬಾಲು ಅಸ್ಕಿ, ಎಂ.ಹೆಚ್.ಜೋಲಿ, ಶಶಿಕಾಂತ ಮೂಕಿಹಾಳ,ರಮೇಶ ಮೂಕಿಹಾಳ, ಬಸವರಾಜ ಯಡಹಳ್ಳಿ, ಮಾನಪ್ಪ ನಾಯ್ಕೋಡಿ, ಭೀಮಣ್ಣ ಚಳ್ಳಗಿ, ಸಂಗಮೇಶ ಚಳ್ಳಗಿ, ಬಸವರಾಜ ತಳವಾರ, ಮಲ್ಲಿಕಾರ್ಜುನ ನಾಟೀಕಾರ, ಕಾಶಿನಾಥ ಮದರಿ, ಭೀಮಣ್ಣ ತಳವಾರ, ಮಲ್ಲಿಕಾರ್ಜುನ ನಾಯ್ಕೋಡಿ ಮತ್ತಿತರರು ಇದ್ದರು.

