ಮಾನ್ವಿ: ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕಲ್ಮಠ ಗಾರಿಗೆ ಜಾತ್ರೆ ಅಂಗವಾಗಿ ಫೆ.12 ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಇಲಾಖೆ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮಾಧ್ಯಮ ಸಮಿತಿ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ರೈತ ಸಮಾವೇಶವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎ.ಆರ್ ಕುರುಬರ ಉದ್ಘಾಟಿಸಲಿದ್ದಾರೆ,ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಪ್ರಕಾಶ ಆರ್ ಚೌಹಾಣ್ ಉದ್ಘಾಟಿಸಲಿದ್ದಾರೆ.
ದಿವ್ಯಸಾನಿಧ್ಯವನ್ನು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವಮಹಾಸ್ವಾಮಿಗಳು, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉಚಿತ ಆರೋಗ್ಯ ಶಿಬಿರವನ್ನು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಬೆಟ್ಟದೂರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟಿ.ಎ.ಪಿ.ಸಿ.ಎಂ.ಸಿ. ಅಧ್ಯಕ್ಷರಾದ ತಿಮ್ಮರೆಡ್ಡಿ ಭೋಗವಾತಿ,ತಾ.ಸಹಾಯಕ ಕೃಷಿ ನಿರ್ದೇಶಕರಾದ ಗುರುನಾಥ ಭೂಸನೂರ,ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಮಿರ್ಜಾಪುರ್,ತಾ,ಅಧ್ಯಕ್ಷರಾದ ಅರುಣಚಂದಾ,ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸಿದ್ದಲಿಂಗಪ್ಪ ವಕೀಲರು, ತಾ.ವೀರಶೈವಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್,ಗೌ.ಅಧ್ಯಕ್ಷರಾದ ಶ್ರೀಧರಸ್ವಾಮಿ, sಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕೃ.ವಿ.ವಿ.ರಾಯಚೂರು ಕೃಷಿ ವಿಜ್ಞಾನಿಗಳಾದ ಡಾ.ಫ್ರಭುರಾಜ್.ಎ, ಡಾ.ಎಂ.ಎ. ಬಸವಣ್ನೇಪ್ಪ, ಡಾ.ತಿಮ್ಮಣ್ಣ, ಮಂಡ್ಯದ ಸಾವಯವ ರೈತ ಕೃಷ್ಣಪ್ಪ ಬೆನ್ನೂರು, ಹಿರಿಯ ಅಂಕಣಕರಾರದ ಅಮರೇಗೌಡ ಗೋನಾವರ , ಡಾಬಸವಪ್ರಸಾದ್ .ಬಿ. ಪಕ್ಷಿ ಪ್ರೇಮಿ ಸಲ್ಲಾವುದಿನ್ನ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿಗಳ ಸಂಚಲನೆಯನ್ನು ಹಿರಿಯ ವರದಿಗಾರರಾದ ಬಸವರಾಜ ಭೋಗವತಿ ನಿರ್ವಹಿಸಲಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *