ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು R C H ವಿಭಾಗ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರಕ್ಕೆ ಒಳಪಡುವ ವಿರೂಪಾಪುರ ಆಯುಷ್ ಆರೋಗ್ಯ ಕೇಂದ್ರದ ವಾಪ್ತಿಯಲ್ಲಿ ಬರುವ 2ನೇ ಅಂಗನವಾಡಿ ಕೇಂದ್ರದಲ್ಲಿ ಇಂದು *ಜಂತುಹುಳು ರಹಿತ* *ಮಕ್ಕಳು* *ಆರೋಗ್ಯವಂತ* *ಮಕ್ಕಳು* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ಹಿರೇಮಠ ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ತಾಲೂಕು ಅರೋಗ್ಯಾಧಿಕಾರಿಗಳಕಾರ್ಯಾಲಯ ಸಿಂಧನೂರು ಇವರು ಮಾತನಾಡಿ ಬಯಲು ವಿಸರ್ಜನೆ ಮಾಡುವುದು, ರಕ್ತ ಹೀನತೆಯಿಂದ ಬಳಲುವುದು, ಅಪೌಷ್ಟಿತಿಕತೆಯಿಂದ ಬಳಲುವುದು, ಹೊಟ್ಟೆ ಡುಮ್ಮ ಕೈಕಾಲು ಸಣ್ಣ ಇರುವುದು, ನಿಶಕ್ತಿ ಇರುವುದು, ಶಾಲಾ ಹಾಜರಾತಿ ಕಡಿಮೆ ಹಾಗುವುದು ಊಟ ಮಾಡಿದ ನಂತರ ಪದೇ ಪದೇ ಶೌಚಾಕ್ಕೆ ಹೋಗುವುದು ಮೇಲಿನ ಲಕ್ಷಣಗಳು ಕಂಡು ಬಂದರೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸುವುದು ಎಂದು ಗರ್ಭಿಣಿ ತಾಯಂದಿರಿಗೆ ಮಾಹಿತಿ ನೀಡಿದರು ನಂತರ ರಾಮಾಂಜನೇಯ ಕುಮಾರ್ RKSK ಆಪ್ತಸಮಾಲೋಚಕರು ಮಾತನಾಡಿ 1 ರಿಂದ 19 ವರ್ಷದೊಳಗೆ ಇರುವ ಎಲ್ಲಾ ಮಕ್ಕಳಿಗೆ ಮಾತ್ರೆ ನುಂಗಿಸುವುದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಬಲ್ಲದು ಜಂತುಹುಳು ಭದವನ್ನು ನಿಯಂತ್ರಿಸಲು ಕೈಕಾಲು ತೊಳೆಯುವುದು, ಉಗುರುಗಳನ್ನು ಕತ್ತರಿಸುವುದು, ಶೌಚಾಲಯ ಬಳಸಿದ ನಂತರ ಕೈ ತೊಳೆಯುವುದು, ವಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಇಸ್ಮಾಲ ಬಿ PHCO, ಶ್ರೀದೇವಿ CHO, ಭೀಮಮ್ಮ, ಭಾರತಿ ಆಶಾ ಕಾರ್ಯಕರ್ತೆಯರು,ತೆರೆಜ ಅಂಗನವಾಡಿ ಸಹಾಯಕಿ ಗರ್ಭಿಣಿ ತಾಯಂದಿರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *