ಸಿಂಧನೂರು ಫೆಬ್ರವರಿ 10: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಸರಕಾರಿ ಪಬ್ಲಿಕ್ ಶಾಲೆ. ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರು ಜಿ.ಎಸ್. ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು ನಂತರ ಮಾತನಾಡಿದವರು ಮಕ್ಕಳು ತಮ್ಮ ಆರೋಗ್ಯಕ್ಕಾಗಿ ತಪ್ಪದೇ ಆಲ್ಬಂಡೊ ಜೋಲ್ ಮಾತ್ರೆಯನ್ನು ಸೇವನೆ ಮಾಡಬೇಕು ಮಕ್ಕಳು ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಡಾಕ್ಟರ ಉಮೈ ಅಮೇರಾ ವೈದ್ಯಾಧಿಕಾರಿಗಳು ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುಲು ಆರು ತಿಂಗಳಿಗೊಮ್ಮೆ ಅಲ್ಪಂಬೋಡ ಜೋಲ್ ಮಾತ್ರೆಯನ್ನು ತಪ್ಪದೇ ಸೇವನೆ ಮಾಡಬೇಕು, ಮಕ್ಕಳು ದೈಹಿಕ ಆರೋಗ್ಯದ ಬೆಳವಣಿಗೆ ಕುಂಠಿತವಾಗುವುದು ತಡೆಗಟ್ಟುಲು ಮಾತ್ರೆಯನ್ನು ತೆಗೆದುಕೊಳ್ಳದದು ಅವಶ್ಯಕವಾಗಿದೆ, ಮಕ್ಕಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯವಾದದ್ದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ರಾಧಾ ಕೊಂಡಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಅಂಬಮ್ಮ ಆಶಾ ಕಾರ್ಯಕರ್ತೆಯರು ಹಂಪಮ್ಮ.ಶರಣಮ್ಮ . ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



