ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಸಿ.ಐ.ಟಿ.ಯು. ತಾ.ಅಧ್ಯಕ್ಷ ಹೆಚ್.ಶರ್ಪುದ್ದೀನ್ ಪೋತ್ನಾಳ್ ಮಾತನಾಡಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಕೇಂದ್ರ ಸರ್ಕಾರವು 29 ಕಾರ್ಮಿಕ ಕಾಯ್ದೆಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿ ವಿಗಂಡಿಸಿದ್ದು ಇವುಗಳು ಕಾರ್ಮಿಕ ವಿರೋಧಿಯಾಗಿದ್ದು ಈ ಕಾಯ್ದೆಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಫೆ.12ರಂದು ಪಟ್ಟಣದ ಶಾಸಕರ ಭವನದಿಂದ ಬಸವ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ವಿವಿಧ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡAತೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎ.ಐ.ಟಿ.ಯು.ಸಿ. ತಾ.ಅಧ್ಯಕ್ಷ ಸಿದ್ದರಾಮಯ್ಯ.ಬಿ. ಅಕ್ಷರದಾಸೋಹ ಸಂಘಟನೆಯ ತಾ.ಅಧ್ಯಕ್ಷೆ. ಥೆರೆಸಾಚನ್ನಪ್ಪ, ಲಕ್ಷಿö್ಮಬಾಯಿ ಪೆರಕಲ್, ಗಂಗೋರೇಕಾ ಗೋಪಾಲ್,ಹುಲಿಗೇಮ್ಮ, ಸರಸ್ವತಿ, ಲಲಿತಾ,ಚೆನಮ್ಮ, ರುದ್ರಪ್ಪನಾಯಕ, ಬಡೇಸಾಬ್ ಉಸ್ಮಾನ್, ಹನುಮಂತ ,ರಮೇಶ, ಸಿದ್ದಲಿಂಗಯ್ಯ ಇದ್ದರು.
ಸಾರ್ವತ್ರಿಕ ಮುಷ್ಕರದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

