ಸಿಂಧನೂರು — ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಲಿಂಗೈಕ್ಯ ಸಿದ್ದಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಒಳಬಳ್ಳಾರಿ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ಫೆಬ್ರುವರಿ 13ರಂದು ಹಾಗೂ 14ರಂದು ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಫೆಬ್ರವರಿ 13ರಂದು ಸಂಜೆ 7 ಗಂಟೆಗೆ ನಡೆಯುವ ರೈತರ ಚಿಂತನಗೋಷ್ಠಿಯ ದಿವ್ಯ ಸಾನಿಧ್ಯವನ್ನು ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಮಹಾಸ್ವಾಮೀಜಿಯವರು ವಹಿಸುವರು. ಮಾನ್ವಿ ತಾಲೂಕಿನ ಚೀಕಲಪರ್ವಿ ಶ್ರೀ ಮಠದ ಸದಾಶಿವ ಸ್ವಾಮೀಜಿ. ಕರೆಗುಡ್ಡ ಶ್ರೀಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ನೇತೃತ್ವ ವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಲಿದ್ದಾರೆ. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿಯವರು ಚಿಂತನಾಗೋಷ್ಠಿ ನಡೆಸಲಿದ್ದಾರೆ. ಸಾಯಂಕಾಲ 7.00 ಗಂಟೆಗೆ ಜೀವಮಾನದ ಸಾಧನೆಗಾಗಿ ಶರಣ ಸ್ತ್ರೀ ಡಿ.ಎಸ್. ಕಲ್ಮಠ ಹಿರಿಯ ನ್ಯಾಯವಾದಿಗಳು ಸಿಂಧನೂರು ಶರಣ ಶ್ರೀ ಕೆ ರಾಮನಗೌಡ ಮಾಲಿ ಪಾಟೀಲ್ ಕೆ. ಬಸಾಪುರ ಅವರಿಗೆ ಸಾವಯುವ ಕೃಷಿಯ ಸಾಧನೆಗಾಗಿ ಸಮಾಜಪರ ಅನಾಥ ಪರ ಸೇವೆಯ ಸಾಧನೆಗಾಗಿ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು. ಇವರೆಲ್ಲರೂಗಳಿಗೆ ಶ್ರೀಮಠದಿಂದ “ವೃಷಭೇಂದ್ರಪುರದ ಶ್ರೀ ಸಿದ್ದಲಿಂಗೇಶ್ವರ ಪ್ರಶಸ್ತಿ “ಯನ್ನು ಅಡವಿ ಅಮರೇಶ್ವರ ಮಠದ ತೊಂಟದಾರ್ಯ ಸ್ವಾಮೀಜಿ. ಬಳ್ಳಾರಿ ಕಲ್ಯಾಣ ಸ್ವಾಮಿಜಿ. ಸಿರುಗುಪ್ಪದ ಬಸವ ಭೂಷಣ ಸ್ವಾಮೀಜಿ ಯದ್ದಲದೊಡ್ಡಿಯ ಸಂಜಯ ಕುಮಾರ ಸ್ವಾಮೀಜಿ. ಹಾಗೂ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ. ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ. ಮಾಜಿ ಸಂಸದರಾದ ಕೆ ವಿರುಪಾಕ್ಷಪ್ಪ. ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ. ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಹಾಗೂ ಇನ್ನೂ ಅನೇಕ ಗಣ್ಯಾತಿಗಣ್ಯರು ಮಠಾಧೀಶರು ಭಾಗವಹಿಸಿ ಫೆಬ್ರುವರಿ 14ನೇ ದಿನಾಂಕದಂದು ಕೂಡ ಹಲವಾರು ಕಾರ್ಯಕ್ರಮಗಳು ನೆರವೇರುತ್ತವೆ ಎಂದು ಶ್ರೀಮಠದ ಮೂಲಗಳು ತಿಳಿಸಿರುತ್ತವೆ

Leave a Reply

Your email address will not be published. Required fields are marked *