ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠ ಶಾಖಾ ಮಠದ ರಾಜಗುರು ಶ್ರೀ ಪರ್ವತೇಶ್ವರ ಬ್ರಹನ್ಮಠದಲ್ಲಿ ಪೂಜ್ಯ ಶ್ರೀ ಷ.ಬ್ರ.108 ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಇಂದಿನಿಂದ “ಗುಡ್ಡಾಪುರದ ಶ್ರೀ ದಾನಮ್ಮದೇವಿ” ಪುರಾಣ ಕಾರ್ಯಕ್ರಮ ಆರಂಭವಾಗಲಿದೆ. ಫೆ.10 ರಿಂದ ಮಾರ್ಚ್ 02 ರವರೆಗೆ ನಾವದಗಿ ಬ್ರಹನ್ಮಠದ ಆವರಣದಲ್ಲಿ ನಡೆಯಲಿರುವ ಈ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಷ.ಬ್ರ. ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ವಹಿಸಲಿದ್ದು, ಗದುಗಿನ ಡಾ.ಪುಟ್ಟರಾಜ ಗವಾಯಿಗಳ ಶಿಷ್ಯ ಖ್ಯಾತ ಪ್ರವಚನಕಾರರಾದ ವೇ.ಮೂ.ರಾಚಯ್ಯ ಶಾಸ್ತ್ರಿ ಹಿರೇಮಠ ಪುರಾಣ ಕಾರ್ಯಕ್ರಮ ನಡೆಸಿಕೊಡುವರು. ಕಲ್ಬುರ್ಗಿಯ ಸೋಮಯ್ಯ ಸ್ವಾಮಿಗಳ ಸಂಗೀತ ಕಾರ್ಯಕ್ರಮಕ್ಕೆ ತಬಲವಾದಕ ಮಹಾಂತೇಶ ಹರನಾಳ ಸಾಥ್ ನೀಡುವರು. ನಾವದಗಿಯ ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು ಸದುಪಯೋಗ ಮಾಡಿಕೊಳ್ಳುಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

