ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಅವರಿಗೆ ಸೇರಿದ ಕಡಲೆ ಬೆಳೆ ಹಾಗೂ ಹೊಟ್ಟು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಸುಮಾರು 4 ಎಕರೆ ವಿಸ್ತೀರ್ಣದ ಕಡಲೆ ಬೆಳೆಯಲ್ಲಿ ಬೆಳೆದಿದ್ದ ಬೆಳೆಗೆ ಅಂದಾಜು 65 ಸಾವಿರ ಹಾಗೂ ಕಡಲೆ ಹೊಟ್ಟಿಗೆ 30 ಸಾವಿರ ಮೌಲ್ಯದ ನಷ್ಟ ಉಂಟಾಗಿದೆ.ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.ಅಗ್ನಿ ಅವಘಡದಲ್ಲಿ ಗಂಗಮ್ಮ ಹೊಂಬಾಳೆ ಅವರ ಬಲಗೈ ಹಾಗೂ ಬಲಮುಖದಲ್ಲಿ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

