ಜಿಲ್ಲಾಡಳಿತದ ಅಡಿಯಲ್ಲಿ ಮೂರು ದಿನಗಳ ಕಾಲ ವಿಜೃಂಬಣೆಯಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಜಿಲ್ಲೆಯ ಹೆಮ್ಮೆಯ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಐಇಸಿ ವಿಭಾಗದಿಂದ ಸಿದ್ದಪಡಿಸಿದ ಆರೋಗ್ಯ ಜಾಗೃತಿ ವಸ್ತುಪ್ರದರ್ಶನ ಮಳಿಗೆಯಲ್ಲಿ ಹದಿಹರೆಯದ ಆರೋಗ್ಯ ಸಮಸ್ಯೆಗಳು, ಬಾಲ್ಯದಲ್ಲಿ ತಟಗಟ್ಟಬಹುದಾದ ಮಾರಕ ರೋಗಗಳ ತಡೆಗೆ ಇರುವ ಲಸಿಕೆಗಳ ಜಾಗೃತಿಗಾಗಿ ಗೊಂಬೆಗಳು, ಕಿಲ್‌ಕಾರಿ ಮೊಬೈಲ್ ರೈಲ್ವೆ ಮಾದರಿ, ಆಸ್ಪತ್ರೆ, ಶಾಲೆಯ ಮಾದರಿ, ಪೌಷ್ಟಿಕ ಆಹಾರ ಸೇವನೆಯ ಪಿರಾಮಿಡ್, ನಮ್ಮ ಕ್ಲಿನಿಕ್, ಹೆಣ್ಣು ಮಗು ಉಳಿಸಿ, ತಾಯಿ ಹಾಲು ಅಮೃತವೆಂಬ ಅಡಿಬರದ ಆಕರ್ಷಕ ಮಾದರಿಗಳು, ಬಾಲ್ಯ ವಿವಾಹ ತಡೆ, ಊಟದ ಮೊದಲು ಶೌಚದ ನಂತರ ಕೈ ತೊಳೆಯುವಿಕೆ, ಡೆಂಗ್ಯು ಆಶಾಕಿರಣ ಫಲಕಗಳು, ಎನ್‌ಸಿಡಿಯಡಿ ಸಿಗರೇಟ್ ಸೇವನೆಯ ದುಷ್ಪರಿಣಾಮ, ಶ್ವಾಸಕೋಶದ ಮಾದರಿ ಮುಂತಾದವು ಉತ್ಸವಕ್ಕೆ ಆಗಮಿಸಿದ್ದ ಮಕ್ಕಳ ಮನಸ್ಸನ್ನು ಸೆಳೆಯುವ ಜೊತೆಗೆ ಆರೋಗ್ಯದ ಕುರಿತು ಕೂತುಹಲದ ಪ್ರಶ್ನೆಗಳನ್ನು ಉತ್ತರ ಪಡೆದುಕೊಂಡು ಸಂತಸದಿಂದ ತೆರಳುತ್ತಿದ್ದುದು ಎಲ್ಲರಿಗೂ ಹೆಮ್ಮೆಯನಿಸಿತು. ಅಲ್ಲದೆ ಪಾಲಕರು ಅಂಗಾಂಗ ದಾನದ ಸೇಲ್ಪಿ ಸ್ಟ್ಯಾಂಡ್‌ನಲ್ಲಿ ಕುಟುಂಬ ಸಮೇತ ಪೋಟೊ ಕ್ಲಿಕ್ಕಿಸಿಕೊಂಡು ಅಭಿಯಾನಕ್ಕೆ ಬೆಂಬಲ ನೀಡಿದರು. ಮನರಂಜನೆ ಒಂದು ಕಡೆಯಾದರೆ ಮಕ್ಕಳ ಆರೋಗ್ಯದ ಸುರಕ್ಷತೆಗೆ ಜಾಗೃತಿಯು ಸಂತಸ ತಂದಿದೆ ಎಂದು ಪಾಲಕರು ಅಭಿಪ್ರಾಯ ಹಂಚಿಕೊಂಡು ಜಿಲ್ಲಾಡಳಿತಕ್ಕೆ ಜಿಲ್ಲಾ ಪಂಚಾಯತಗೆ ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದು ಉತ್ಸವದಲ್ಲಿ ಇದಕ್ಕೆ ಅವಕಾಶ ಮಾಡಿದ ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಧನ್ಯವಾದಗಳನ್ನು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದ್ದಾರೆ.

