ಲಿಂಗಸಗೂರು : ಫೆ. 9 –
ಹಟ್ಟಿ ಚಿನ್ನದಗಣಿಗೆ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ್ ಮೊಮ್ಮಗ, ಎಂಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪೂರ್ ಮಗನ ಮದುವೆಗೆ ಆಗಮಿಸಿ ವಧು-ವರರಿಗೆ ಆಶೀರ್ವದಿಸಿದ ನಂತರ ಹಟ್ಟಿ ಪಟ್ಟಣಕ್ಕೆ ಭೇಟಿ ನೀಡಿದರು. ಹಟ್ಟಿ ಪಟ್ಟಣದಲ್ಲಿ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ, ಹಟ್ಟಿ ಚಿನ್ನದಗಣಿ ಕಂಪನಿಯ 2800 ಅಡಿ ಭೂ ಕೆಳಮೈಯಲ್ಲಿ
ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.
ಭೂ ಕೆಳಮೈ ವೀಕ್ಷಣೆಯ ನಂತರ ಚಿನ್ನದ ಅದಿರು ಸಂಸ್ಕರಣೆಯ ಲೋಹ ವಿಭಾಗವನ್ನು ಸಹ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ್, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್, ಜಿ.ಎಂ.ಶಫುಲ್ಲಾ ಖಾನ್, ವ್ಯವಸ್ಥಾಪಕ (ಮಾಸ) ಯಮನೂರಪ್ಪ ಗೌಡರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಮಿಕ ಮುಖಂಡರು ಇದ್ದರು.

