ತಾಲೂಕಿನ ಒಳಬಳ್ಳಾರಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆಗೆ ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಕೇಳಿ ದಿನಾಂಕ ನಿಗದಿ ಮಾಡಲಾಗಿತ್ತು ಆದರೆ ಶಾಸಕರು, ತಾಲೂಕು ಪಂಚಾಯತ ಇಒ ಚಂದ್ರಶೇಖರ, ಪಿಡಿಒ ಬಸವರಾಜ ಸೂಡಿ, ಕಾರ್ಯಕ್ರಮಕ್ಕೆ ಬಾರದೆ ನಿರ್ಲಕ್ಷ್ಯ ಮಾಡಿದ್ದು, ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಇವರು ಬಂದಿಲ್ಲ ಎಂದು ನಿಕಟ ಪೂರ್ವ ಅಧ್ಯಕ್ಷೆ ಮೂಕಾಂಬಿಕಾ ಗಂ ಭೀಮಣ್ಣ ನಾಯಕ ಆರೋಪ ಮಾಡಿದರು.

ರವಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಥರ ಅವಮಾನ ನಮಗೆ ಇದು ಮೂರನೇ ಸಲ ಬಂಗಾಲಿ ಕ್ಯಾಂಪ್,
ಅಂಬಾಮಠದಲ್ಲಿನ ಮುಖ್ಯಮಂತ್ರಿಗಳ ಕಾರ್ಯಕ್ರಮ ಹೀಗೆ ಮೂರು ಸಾರಿ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ಶಾಸಕರನ್ನು ಕೇಳಿಯೇ ನಾವು ದಿನಾಂಕವನ್ನು ನಿಗದಿ ಮಾಡಿದ ಮೇಲೆಯೂ ಬಾರದೆ ಇರುವುದಕ್ಕೆ ಕಾರಣ ಏನು? ಶಾಸಕರು, ಇಒ ಚಂದ್ರಶೇಖರ, ಪಿಡಿಒ ಬಂದಿಲ್ಲ ಮತ್ತು ಉದ್ಘಾಟಿಸಿದ ನಾಮಫಲಕವನ್ನು ಸಹ ಕಿತ್ತಲು ಪ್ರಯತ್ನ ಮಾಡಿದರು. ಆ ಪ್ರಯತ್ನ ಸಫಲ ಆಗಲಿಲ್ಲ ನಾಮ ಫಲಕಕ್ಕೆ ಈಗ ಬಟ್ಟೆ ಮುಚ್ಚಿದ್ದಾರೆ.

ನಮ್ಮಿಂದ ಉದ್ಘಾಟನೆ ಮಾಡಿದ್ದು ಇವರಿಗೆ ಇಷ್ಟವೆ ಇದ್ದಂತಿಲ್ಲ! ಈಗಲೂ ಇಒ ಚಂದ್ರಶೇಖರ, ಪಿಡಿಒ ಬಸವರಾಜ ಸೂಡಿ, ಅಧಿಕಾರಿಗಳಂತಿರದೆ ಶಾಸಕರ ಹಿಂಬಾಲಕರಂತೆ ವರ್ತನೆ ಮಾಡುತ್ತಿದಗದಾರೆಂದು ಅಧಿಕಾರಿಗಳ ಮೇಲೆ ಆರೋಪ ಮಾಡಿದರು. ಶ್ರೀ ದೇವಿ ಶ್ರೀನಿವಾಸ ಅವರು ಪ್ರತಿಯೊಂದು ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡು ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ ಇದು ಶಿಷ್ಟಾಚಾರವೇ ? ಜೊತೆಗೆ ಪತ್ರಿಕಾಗೋಷ್ಠಿಯನ್ನು ನಡೆಸದಂತೆ ನಮಗೆ ಪಿಡಿಒ ಬಸವರಾಜ ಸೂಡಿ ಒತ್ತಡ ಹಾಕಲು ಯತ್ನಿಸುತ್ತಿದ್ದಾನೆ. ಕಳೆದ 7 ವರ್ಷಗಳಿಂದಲೂ ಒಳಬಳ್ಳಾರಿ ಗ್ರಾಮ ಪಂಚಾಯತಿಯನ್ನು ಹಳೆಯದಾದ ಗೊಡಾನ್, ಶಾಲಾ ಕಟ್ಟಡದಲ್ಲಿ ನಡೆಸಲಾಗಿತ್ತು. ನಾವು
ಮುತುವರ್ಜಿಯಿಂದ ನರೇಗಾ ಯೋಜನೆ ಅಡಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಮುಗಿಸಿದ್ದೆವೆ. ಮತ್ತು 5 ವರ್ಷಗಳ ಹಿಂದೆಯೇ 14 ಲಕ್ಷ ಹಣ ಬಂದಿದೆ ಅದನ್ನು ಯಾರಿಗೂ ಕೂಡ ತಿಳಿಯದಂತೆ ಮುಚ್ಚಿಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಉದ್ಬವವಾಗಿದೆ.

ಉದ್ಘಾಟನೆ ಮಾಡುವ ಪೂರ್ವವಾಗಿ ವಿಶೇಷ ಸಭೆ ನಡೆಸಿ, ಕಾರ್ಯಕ್ರಮ ಕುರಿತು ಸೂಚಿಸಲಾಗಿತ್ತು. 17 ಜನರ ಗ್ರಾಮ ಪಂಚಾಯತಿ ಸದಸ್ಯರಲ್ಲಿ 12 ಜನರು ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದಸ್ಯ ಬಸಲಿಂಗಯ್ಯ ಮಾತನಾಡಿ ಪಂಚಾಯತಿ ಕಟ್ಟಡಕ್ಕೆ ತಲಾ 4 ಲಕ್ಷ ರೂ.ನಂತೆ ನಮ್ಮ ಕೈಯಿಂದಲೆ ಖರ್ಚು ಮಾಡಿ, ಕಟ್ಟಡ ಕಾಮಗಾರಿ ಮುಗಿಸಿದ್ದೇವೆ ಎಂದರು.

ಈ ವೇಳೆ: ಗ್ರಾಮ ಪಂಚಾಯತಿ ಸದಸ್ಯ ರಂಗನಾಥ, ಬಿಜೆಪಿ ಪಕ್ಷದ ಗ್ರಾಮೀಣ ಮಂಡಲ ಅಧ್ಯಕ್ಷರಾದ ಯಂಕೋಬ ರಾಮತ್ನಾಳ್, ಮುಖಂಡ ಆದಿಮನಿ ಪರಮೇಶ, ಭೀಮಣ್ಣ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *