ನೈಜ್ಯ ದೆಸೆ :
ಲಿಂಗಸಗೂರು : ಫೆ.9 – ಪಟ್ಟಣದ ರಾಯಚೂರು ರಸ್ತೆಯ ಖಾಸಗಿ ಲೇಔಟ್ ಬಳಿ ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಪುತ್ರನ ಮದುವೆ ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿ
ವೇಳೆ ಹೆಲಿಪ್ಯಾಡ್ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿ ಅಧಿಕಾರಿಗಳು ತರಾತುರಿಯಲ್ಲಿ ಓಡಾಡಿದ ಘಟನೆ ಜರುಗಿತು. ಸಿಎಂ ಹಾಗೂ ಡಿಸಿಎಂ ಆಗಮನಕ್ಕಾಗಿ ಪ್ರತ್ಯೇಕವಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಆದರೆ ಸಿಎಂಗೆ ಮೀಸಲಾದ ಹೆಲಿಪ್ಯಾಡ್‌ಗೆ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟ‌ರ್ ಇಳಿದಿದ್ದು, ಕಲಬುರಗಿ ರಸ್ತೆಯ ಶಾಸಕ ಮಾನಪ್ಪ ರವರಿಗೆ ಸೇರಿದ ಹೆಲಿಪ್ಯಾಡ್‌ನಲ್ಲಿ ಸಿಎಂ ಹೆಲಿಕಾಪ್ಟರ್ ಇಳಿದ ಘಟನೆ ನಡೆದಿದೆ. ಇದರಿಂದ ಸಿಎಂ ಸ್ವಾಗತಕ್ಕೆ ಸಿದ್ಧವಾಗಿದ್ದ ಅಧಿಕಾರಿಗಳಿಗೆ ಕ್ಷಣಕಾಲ ಗೊಂದಲ ಮತ್ತು ಅಚ್ಚರಿ ಉಂಟಾಯಿತು. ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಹೆಲಿಕಾಪ್ಟರ್ ಇಳಿಯುವ ಸ್ಥಳಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿಎಂ ಹಾಗೂ ಡಿಸಿಎಂ ಆಗಮನ ಸಮಯದಲ್ಲೂ ವ್ಯತ್ಯಾಸವಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಹುಬ್ಬಳ್ಳಿ ಕಡೆಗೆ ಹೊರಟರು. ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತ್ಯೇಕವಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *