ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಸ್ಥಾಪನೆ ವಿರೋಧಿಸಿ ನಡೆದ ಸುಧೀರ್ಘ ಹೋರಾಟ ಅದರ ಭಾಗವಾಗಿ 2025ರ ಫೆ. 24 ರಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ.
ಗವಿಮಠದಿಂದ ತಾಲೂಕ ಕ್ರೀಡಾಂಗಣದ ವರೆಗೆ ಪ್ರತಿಭಟನಾ ಮೆರವಣಿಗೆ ಇರಲಿದೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿ ಇಡಲಾಗಿದೆ.

ಬಲ್ಡೋಟ ಕಣ್ಣೊರೆಸುವ ಸಿ ಎಸ್ ಆರ್ ಫಂಡ್ ಸಹಾಯದ ಟ್ರೀ ಗಾರ್ಡ ಮತ್ತು ಸಿಮಂಟ್ ಆಸನಗಳ ಮರಳಿಸುವ ಅಭಿಯಾನಕ್ಕೆ ಚಾಲನೆ.

20 ಗ್ರಾಮಗಳ ಆರೋಗ್ಯ ಸಮೀಕ್ಷೆ, ಪರಿಸರ ಮತ್ತು ಆರೋಗ್ಯ ಪುನರ್ ನಿರ್ಮಾಣಕ್ಕೆ ಒತ್ತಾಯ. ತಜ್ಞರ ವರದಿಯಂತೆ ಕಾರ್ಖಾನೆಗಳ ಸ್ಥಳಾಂತರ ಆರಂಭಿಸಬೇಕು.

ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ದ ಸಂಸ್ಕರಿಸಿದ ನೀರನ್ನು ಜನ ಜಾನುವಾರುಗಳಿಗೆ ಸರಬುರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು.

ಬಸಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು.

ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವದು.

ಈ ಬೇಡಿಕೆ ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಹೋರಾಟ ವೇದಿಕೆ ಸಂಚಾಲಕ ಕೆ. ಬಿ. ಗೋನಾಳ ಅವರು ಮಂಡಿಸಿದರು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ಅನುಮೋದಿಸಿ ಮಾತನಾಡಿದರು.

Leave a Reply

Your email address will not be published. Required fields are marked *