ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕುಗಳಲ್ಲಿ ತಲಾ ಒಂದು ಗ್ರಾಮದ ಜನರಲ್ಲಿರುವ ಆರೋಗ್ಯಕ್ಕೂ, ಕಾರ್ಖಾನೆಗಳ ಸಮೀಪದ ಗ್ರಾಮದ ಜನರ ಆರೋಗ್ಯಕ್ಕೂ ತೀವ್ರತೆರನಾದ ವ್ಯತ್ಯಾಸಗಳಿವೆಯೇ ಎನ್ನುವುದನ್ನು ಕಂಡುಕೊಳ್ಳಲು ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಗುರುವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ ನೇಗಿ ಅವರು ಭೇಟಿ ನೀಡಿದರು. ಹೋರಾಟಗಾರರ ಬೇಡಿಕೆಗಳಿಗೆ ಪೂರಕವಾಗಿ ಜಿಲ್ಲಾಡಳಿತ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಧರಣಿ ನಿರತರು ‘ಕಾರ್ಖಾನೆಗಳ‌ ಮಾಲೀಕರು ನಮ್ಮ ಜಿಲ್ಲೆಯವರಲ್ಲ, ಅವರಿಗೆ ಇಲ್ಲಿಯ ಜನರ ಕಾಳಜಿ ಬೇಕಿಲ್ಲ. ಕಲುಷಿತ ಗಾಳಿ ಬರುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಈಗಿನಿಂದಲೇ ಹೋರಾಟ ಮಾಡಲಾಗುತ್ತಿದೆ. ಅಂತರ್ಜಲಕ್ಕೆ ಕೊಳವೆ ಬಾವಿಗಳ ಮೂಲಕ ಕಲುಷಿತ ನೀರು ಕಳಿಸಲಾಗುತ್ತಿದೆ’ ಎಂದು ಹೇಳಿದರು.

100ನೇ ದಿನದ ಹೋರಾಟ: ಫೆ. 7ರಂದು ಧರಣಿಯ 100ನೇ ದಿನವಾಗಿದ್ದು, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಕಾರ್ಖಾನೆಗಳ ಬಾಧಿತ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಜನರನ್ನು ಭೇಟಿ ಮಾಡಿ ವೇದಿಕೆ ಸ್ಥಳಕ್ಕೆ ಬರಲಿದ್ದಾರೆ. ಸ್ವಾಮೀಜಿಗಳು, ಸಾಹಿತಿಗಳು ಪಾಲ್ಗೊಳ್ಳುವರು.

ಹೋರಾಟ ವೇದಿಕೆಯ ಚಂದ್ರಶೇಖರ ಕವಲೂರು, ಎಂ.ಎಂ.ಮದರಿ, ಮಂಜುನಾಥ ಗೊಂಡಬಾಳ, ಮಲ್ಲಿಕಾರ್ಜುನ ಬಿ‌.ಗೋನಾಳ, ಶಿವಕುಮಾರ ಕುಕನೂರು, ಮಂಜುನಾಥ ಜಿ ಗೊಂಡಬಾಳ, ರಮೇಶ ತುಪ್ಪದ, ಶರಣು ಗಡ್ಡಿ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ, ಬಿ.ಜಿ.ಕರಿಗಾರ, ಸಿ.ಬಿ.ಪಾಟೀಲ್, ಜಿ.ಬಿ.ಪಾಟೀಲ್, ಗಂಗಾಧರ ಖಾನಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾರ್ಖಾನೆಗಳ ವಿಸ್ತರಣೆ ವಿರೋಧಿ ಹೋರಾಟಕ್ಕೆ ನಾಳೆಗೆ 100 ದಿನ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ ಧರಣಿ ನಿರತರು ಬಾಧಿತ ಗ್ರಾಮಗಳಿಗೆ ಭೇಟಿ ನೀಡಲಿರುವ ಸ್ವಾಮೀಜಿ

ಅಲ್ಲಮಪ್ರಭು ಬೆಟ್ಟದೂರು ವೇದಿಕೆಯ ಪ್ರಧಾನ ಸಂಚಾಲಕಮುಖ್ಯಮಂತ್ರಿಗೆ ಸಲಹೆ ಕೊಡುವವರು ಅವರ ಆಪ್ತ ಶಾಸಕರು ಜಿಲ್ಲೆಯಲ್ಲಿದ್ದಾರೆ. ಎಲ್ಲರೂ ಸೇರಿ ಮಾತನಾಡಬೇಕು. ಕೆಲವರಷ್ಟೇ ಮಾತನಾಡಿ ಹಲವರು ಸುಮ್ಮನಾದರೆ ಜೀವನ ಪೂರ್ತಿ ನೋವು ಅನುಭವಿಸಬೇಕಾಗುತ್ತದೆ.ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿಮುಖ್ಯಮಂತ್ರಿ ಸೂಚನೆ ಬಳಿಕ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕಾರ್ಯ ಸ್ಥಗಿತವಾಗಿದೆ. ಸದ್ಯಕ್ಕೆ ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಎ.ಮುರಿಗೆಪ್ಪ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಕಾರ್ಖಾನೆಗಳು ವಿಸ್ತರಣೆಯಾದರೆ ಆ ವಿಷಾನಿಲ ಬದುಕು ಹಾಳು ಮಾಡುತ್ತದೆ. ಬದುಕನ್ನು ಬಣ್ಣಗೆಡಿಸುವ ಕೆಲಸ ನಡೆಯುತ್ತಿದೆ. ನಾವು ಕಾರ್ಖಾನೆಗಳ ವಿರೋಧಿಗಳಲ್ಲ. ಆರೋಗ್ಯ ಜೀವ ತೆಗೆಯುವ ಯಾವ ಕಾರ್ಖಾನೆಗಳು ಬೇಡ.
ಭೂಮಿ ಕೊಟ್ಟವರ ಹೋರಾಟ ಸ್ಥಳಕ್ಕೆ ಭೇಟಿ

ಕೊಪ್ಪಳ: ಬಿಎಸ್‌ಪಿಎಲ್ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು ಆಗ್ರಹಿಸಿ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರು ಇಲ್ಲಿನ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ನಡೆಸುತ್ತಿರುವ 63ನೇ ದಿನದ ಹೋರಾಟ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಅವರ ಬೇಡಿಕೆಗಳನ್ನು ಆಲಿಸಿದರು. ’20 ವರ್ಷಗಳ ಹಿಂದೆ ಕೆಐಎಡಿಬಿ ಮೂಲಕ ರಾಜ್ಯ ಸರ್ಕಾರ ಹಾಲವರ್ತಿ ಬಸಾಪುರ ಕೊಪ್ಪಳ ಕಿಡದಾಳ ಗ್ರಾಮಗಳ ರೈತರ ಜಮೀನನ್ನು ಕಾರ್ಖಾನೆ ಸ್ಥಾಪಿಸುವ ಉದ್ದೇಶದಿಂದ ಭೂಸ್ವಾಧೀನ ಪಡಿಸಿಕೊಂಡಿದೆ. ಇದುವರೆಗೂ ಆಗಿಲ್ಲ. 1034 ಎಕರೆ ಭೂಮಿ ಕಳೆದುಕೊಂಡ 359 ರೈತರ ಸ್ಥಿತಿ ಅತಂತ್ರವಾಗಿದೆ’ ಎಂದು ಹೋರಾಟ ನಿರತರು ಗಮನಕ್ಕೆ ತಂದರು. ಎಸ್‌.ಪಿ. ಜಿ.ಪಂ. ಸಿಇಒ ಇದ್ದರು. ರೈತ ಮುಖಂಡರಾದ ಹನುಮಂತಪ್ಪ ಕೌದಿ ಮಲ್ಲಪ್ಪ ಚುಕನಕಲ್ ರಮೇಶ್ ಕಂಬಳಿ ಹನುಮೇಶ ಹಾಲವರ್ತಿ ಮನೋಜ್ ಹಾಲವರ್ತಿ ಸ್ವಾಮಿ ಹಾಲವರ್ತಿ ಪ್ರಾಣೇಶ್ ಹಾಲವರ್ತಿ ಮಾರುತಿ ಕುರುಗಡ್ಡಿ ಯಮನೂರಪ್ಪ ಏಳ್ ಕುರಿ ಈರಣ್ಣ ಶೆಟ್ಟರ ಪೀರಸಾ ಮಲ್ಲೇಶ್ ಕುಟಗನಳ್ಳಿ ಹುಲುಗಪ್ಪ ಕಂಬಳಿ ನಾಗರಾಜ್ ಭೋವಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *