ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆಯಿತು. ಒಟ್ಟು ಐದು ವೇದಿಕೆಗಳಲ್ಲಿ ಕಲೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ಚಾಲನೆ ಪಡೆದುಕೊಂಡವು.ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಮುಖ್ಯವೇದಿಕೆ ಸಂಜೆಯಾಗುತ್ತಲೇ ಬಣ್ಣದ ಬೆಳಕಿನ ವಿದ್ಯುತ್‌ ದೀಪಗಳೊಂದಿಗೆ ಮೆರುಗು ಪಡೆದುಕೊಂಡಿತು.
ಪಂಡಿತ ನರಸಿಂಹಲು ವಡವಟ್ಟಿ ಅವರಿಂದ ಕ್ಲಾರಿನಿಯೊಟ್ ವಾದನ, ಶರಣಪ್ಪ ಗೋನಾಳ ಜಾನಪದ ಗೀತೆ, ವಿರೂಪಾಕ್ಷವಂದಲಿ, ಸುಗೂರೇಶ ಅಸ್ಕಿಹಾಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದರು. ಒಟ್ಟು 10 ಪ್ರಮುಖ ಕಲಾವಿದರು ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನ ರಂಜಿಸಿದರು.

ವೇದಿಕೆ-2ರಲ್ಲಿ 40 ಕಲಾವಿದರು ವಚನ, ಸುಗಮ ಸಂಗೀತ, ಭಜನೆ, ಭಕ್ಷಿ ಸಂಗೀತ, ತತ್ವ ಪದ ಜಾನಪದ ಹಾಗೂ ಗಜಲ್‌ ಹಾಡಿದರು. ಭರತನಾಟ್ಯ, ಲಂಬಾಣಿನೃತ್ಯ ಹಾಗೂ ಸಮೂಹ ನೃತ್ಯ ಗಮನ ಸೆಳೆದವು. ವೇದಿಕೆ-3ರಲ್ಲಿ ಸಹ 48 ಕಲಾವಿದರು ಕಾರ್ಯಕ್ರಮ ನೀಡಿದರು.

ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ನಾಟಕ, ರಂಗಭೂಮಿ, ಬಯಲಾಟ ಪ್ರದರ್ಶನ ನಡೆದು ಒಟ್ಟು 12 ಕಲಾ ತಂಡಗಳು ಪ್ರೇಕ್ಷಕರ ಮನ ರಂಜಿಸಿದರು. ಮಹಿಳಾ ಸಮಾಜದ ಆವರಣದಲ್ಲಿ ಮೊದಲ ದಿನ ಕವಿಗೋಷ್ಠಿ ನಡೆಯಿತು. 75 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಉದ್ಘಾಟಿಸಿದರು. ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.

‌ಗೊಂದಲಕ್ಕೀಡಾದ ಜನ: ಐದು ವೇದಿಕೆಗಳಲ್ಲಿ ಕಾರ್ಯಕ್ರಮ, ಕೃಷಿ ಮೇಳ, ಮತ್ಸ್ಯ ಮೇಳ, ಆಹಾರ ಮೇಳ, ವಿಶ್ವಕರ್ಮ ಮೇಳ, ಫಲಪುಷ್ಪ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಮೆರವಣಿಗೆ, ಬೈಕ್‌ ರ್‍ಯಾಲಿ, ಹೆಲಿಕಾಪ್ಟರ್‌ ರೈಡಿಂಗ್, ಅಮೇಜಿಂಗ್‌ ಪಾರ್ಕ್ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಏಕಕಾಲಕ್ಕೆ ಆರಂಭವಾದ ಕಾರಣ ಸಾರ್ವಜನಿಕರು ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವ ಗೊಂದಲಕ್ಕೆ ಬಿದ್ದರು.

ಜಿಲ್ಲಾ ರಂಗ ಮಂದಿರ, ಮಹಿಳಾ ಸಮಾಜ ಹಾಗೂ ವಿಶ್ವವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಪ್ರೇಕ್ಷಕರ ಕೊರತೆ ಕಂಡು ಬಂದಿತು.

ಕೃಷಿ ಮೇಳ, ಆಹಾರ ಮೇಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಸಂಜೆ ವೇಳೆಗೆ ಅಪಾರ ಸಂಖ್ಯೆಯಲ್ಲಿ ಜನ ಹರಿದು ಬಂದರು. ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ರಾಯಚೂರು ಉತ್ಸವದ ಪ್ರಧಾನ ವೇದಿಕೆಗೆ ಬರಲು ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿತ್ತು. ಮುಖ್ಯ ದ್ವಾರದಲ್ಲಿ ಸಾರ್ವಜನಿಕರು ಸುಲಭವಾಗಿ ಬಂದು ಹೋಗಲು ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರು, ಕಲಾವಿದರು, ಪತ್ರಕರ್ತರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ನಿಲುಗಡೆಗೂ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಬದಿಗೆ ನಿಲ್ಲಿಸಿದ ದ್ವಿಚಕ್ರವಾಹನಗಳನ್ನು ಸಂಚಾರ ಠಾಣೆಯ ಪೊಲೀಸರು ಟೋಯ್‌ ವಾಹನದ ಮೂಲಕ ಹೊತ್ತೊಯ್ದು ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು.

Leave a Reply

Your email address will not be published. Required fields are marked *