ರಾಯಚೂರು ಫೆಬ್ರವರಿ 06 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸ್ಪರ್ಧಾ ವೀಕ್ಷಿಸಲು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ವೀಕ್ಷಿಸಿ, ಹರ್ಷ ವ್ಯಕ್ತಪಡಿಸಿದರು.
ಹೌದು ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿದ್ದು, ಕಳೆದ ಜನವರಿ 16 ರಿಂದಲೇ ವಿವಿಧ ಸ್ಪರ್ಧೆಗಳು ಪ್ರಾರಂಭಗೊಂಡು ಸೈಕ್ಲಿಂಗ್ ಮ್ಯಾರಥಾನ್ ಹಾಗೂ ಮ್ಯಾರಥಾನ್ ಓಟ, ಬಾಡಿ ಬಿಲ್ಡಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಈಗಾಗಲೆ ಯಶಸ್ವಿಯಾಗಿ ಜರುಗಿದ್ದು, ಫೆ. 6 ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಮತ್ತು ಕುಸ್ತಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡವು.
ಶುಕ್ರವಾರನಡೆದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಿಗೆ ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷ ರಾಣಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ್ ನಾಯಕ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಡಿ ಬಡಿಗೇರ, ಆಹಾರ ಇಲಾಖೆಯ ಉಪನಿರ್ದೇಶಕ ನಾಸೀರ ಅಹ್ಮದ್, ಶಿಕ್ಷಣ ಇಲಾಖೆಯ ರಂಗಸ್ವಾಮಿ, ಪಾಲಿಕೆ ಎಇ ಮಹೇಶ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ದೈಹಿಕ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅತ್ಯಂತ ರೋಚಕತೆಯಿಂದ ಕೂಡಿದ್ದ ಸಂಗ್ರಾಣಿ ಕಲ್ಲು, ಉಸುಕಿನ ಮೂಟೆ ಎತ್ತುವ ಮತ್ತು ಕುಸ್ತಿ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಾರ್ವಜನಿಕರು ಬಿಸಿಲಿನ ತಾಪವನ್ನು ಲೆಕ್ಕಿಸದೆ ಕುತೂಹಲದಿಂದ ಈ ಸ್ಪರ್ಧೆಗಳನ್ನು ವೀಕ್ಷಿಸಿ, ಚಪ್ಪಾಳೆ ಹಾಗೂ ಸಿಳ್ಳು ಹಾಕುವ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿರುವುದು ಕಂಡುಬAತು.
ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆಯ ವಿಜೇತರು: ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಇದರಲ್ಲಿ ರಾಮು ತೆಲಂಗಾಣ ಅವರು ಪ್ರಥಮ ಸ್ಥಾನ ಪಡೆದುಕೊಂಡರು. ಅದೇ ರಿತಿ ಪ್ರತಾಪ್ ನಾಯಕ ನಾಗನದೊಡ್ಡಿ ದ್ವಿತೀಯ ಮತ್ತು ಪ್ರಕಾಶ ಯಾದವ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಉಸುಕಿನ ಮೂಟೆ ಎತ್ತುವ ಸ್ಪರ್ಧೆ: ಉಸುಕಿನ ಮೂಟೆ ಎತ್ತುವ ಸ್ಪರ್ಧೆಯಲ್ಲಿ ಸುಮಾರು 30 ಕ್ಕೂ ಅಧಿಕ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು, ಇದರಲ್ಲಿ ಮರಿಯಪ್ಪ ಅವರು 230 ಕೆಜಿ ಉಸುಕಿನ ಮೂಟೆ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು. ಅದೇ ರಿತಿ ಸಕ್ರಪ್ಪ ನಾಯಕ ಅವರು 210 ಕೆಜಿ ಎತ್ತುವುದರೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಶಿವಕುಮಾರ ಅವರು 200 ಕೆಜಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಕುಸ್ತಿ ಸ್ಪರ್ಧೆಯ ವಿಜೇತರು: ಕುಸ್ತಿ ಸ್ಪರ್ಧೆಯಲ್ಲಿ 56 ಕುಸ್ತಿಪಡುಗಳು ಭಾಗವಹಿಸಿದ್ದು, ಪುರುಷರ ಕುಸ್ತಿ ಸ್ಪರ್ಧೆಯಲ್ಲಿ `ಬಸವರಾಜ ಪಾಟೀಲ್ ಅವರು ಎಡೆದೊರೆ ಕಂಠೀರವ, ಹನುಮಂತ ಮರಮ್ಮನಹಳ್ಳಿ ಎಡೆದೊರೆ ಕೇಸರಿ, ಯೋಗೇಶ ಎಡೆದೊರೆ ಕಿಶೋರ ಹಾಗೂ ಮಾರುತಿ ಅವರು ಎಡೆದೊರೆ ಕುಮಾರ’ ಕುಸ್ತಿ ಗಧೆ ಗೆದ್ದರು. ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಜಲಜಾಕ್ಷಿ ಎಸ್ ಅವರು ಎಡೆದೊರೆ ಕಿಶೋರಿ ಮತ್ತು ಸತ್ಯಶ್ರೀ ಅವರು ಎಡೆದೊರೆ ಕುಮಾರಿ’ ಕುಸ್ತಿ ಗಧೆ ಪಡೆದುಕೊಂಡರು.

Leave a Reply

Your email address will not be published. Required fields are marked *