ತಾಲೂಕಿನ ಕುರುಕುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ 5 ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಅವರ ಕುಟುಂಬಸ್ಥರಿಗೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರ್ವಿಹಾಳ ಭೇಟಿ ನೀಡಿ ಸಾಂತ್ವನ ನೀಡಿದರು.
ಗುರುವಾರ ತಾಲೂಕಿನ ಕುರುಕುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ 5 ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ತಂದೆ ಶಾಮಣ್ಣ ಭಜಂತ್ರಿ ಕುಟುಂಬದವರಿಗೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ 50 ಸಾವಿರ ನಗದು ನೀಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ: ಮುಖಂಡರಾದ ಬಸವರಾಜ ಪಗಡದಿನ್ನಿ, ಮಹಾಂತಪ್ಪ ಸಾಹುಕಾರ ಬಪ್ಪೂರು, ಬಸವರಾಜ ಸಿಂಧನೂರು, ಬಿಎಂಕೆ.ದೇವಣ್ಣ ಬಪ್ಪೂರು, ಚಂದ್ರಶೇಖರ ತಿಡಿಗೋಳ, ಭೀಮಣ್ಣ, ಹುಲುಗಪ್ಪ, ನಾಗರಾಜ ಪೊ.ಪಾ, ನಾಗಪ್ಪ ಡಂಕನಕಲ್, ಗ್ರಾ.ಪಂ. ಸದಸ್ಯ ಪಂಪಣ್ಣ ಹಲಗಿ, ಅಂಬಣ್ಣ ನಾಯಕ ಹಾಗೂ ಯಮನೂರ ನಾಯಕ, ಶರಣಪ್ಪ ಭಜಂತ್ರಿ, ನಿರುಪಾದಿ ಭೋವಿ, ಗುಡದಪ್ಪ ಶೇಶಿಗೇರಿ, ವಿಜಯಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

