ಸಮಾಜ ಸೇವಕ, ಕಿರುತೆರೆ ಕಲಾವಿದ ನಿರ್ದೇಶಕ ಮತ್ತು ಜಾತ್ಯತೀತ ನಿಲುವಿನ ಜಫರ ಮೊಹಿಯುದ್ದೀನ ಇವರಿಗೆ ಪ್ರತಿಷ್ಠಿತ ಫೆಡರಲ ಶಿಕ್ಷಣ ಸಂಸ್ಥೆ ವತಿಯಿಂದ ಇಂದು ಶಿಕ್ಷಣ ಸಂಸ್ಥೆಯಲ್ಲಿ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.. ಶಾಲು ಹೊಧಿಸಿ ಹೂಮಾಲೆ ಹಾಕಿ,ಪುಷ್ಪ ತಾಂಬೂಲ ನೀಡಿ ಸತ್ಕರಿಸಿದರು. ಸಾಮಾಜಿಕ ಚಟುವಟಿಕೆ ಬರಹದಲ್ಲಿ ಮತ್ತು ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ಸದಾ ನಿರತರಾಗಿರುತ್ತಾರೆ ಎಂದರು. ಶಾಲಾ ಮಕ್ಕಳು ಸದಾ ಓದಿನತ್ತ ಗಮನ ಹರಿಸಬೇಕು. ಓದಿದ ಶಿಕ್ಷಣ ಸಂಸ್ಥೆಗೆ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತರಬೇಕು ಎಂದರು. ಇದೇ ಸಂದರ್ಭದಲ್ಲಿ ಜಫರ್ ಅವರು ಈಡಿಯಲ್ಲಿ ಭಾಗವಹಿಸಿ ಪ್ರತಿಬಿಂಬದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಸಂದರ್ಭದಲ್ಲಿ ಅಕ್ಬರ್ ಮೊಹಿಯುದ್ದೀವ, ಮೊಹಮದ ಎಕ್ಬಾಲ್, ಎಜಾಜ್ ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಲೇಖ ಮತ್ತು ಶಿಕ್ಷಣ ಸಂಸ್ಥೆ ಸಿಬ್ಬಂದಿಗಳಿದ್ದರು.

