ಸಿಂಧನೂರು, ನ.23: ನೆರೆಹೊರೆಯವರ ಹಕ್ಕುಗಳನ್ನು ಉತ್ತೇಜಿಸುವ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ, ನೆರೆಹೊರೆಯ ಮಾದರಿ–ಮಾದರಿ ಸಮಾಜ ಕಾರ್ಯಕ್ರಮದ ಅಡಿಯಲ್ಲಿ 23-11-2025 ರಂದು ಮಿಲಾಪ್ ಶಾದಿ ಮಹಲ್‌ನಲ್ಲಿ ಜಮಾಅತೆ ಇಸ್ಲಾಮೀ ಬಂಧುಗಳ ಪರಿವಾರ ಸಮ್ಮೇಳನವನ್ನು ಭವ್ಯವಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮೌಲಾನಾ ಮುಜಫರ್ ಹುಸೇನ್ ನದ್ವಿ (ಚಿತ್ರದುರ್ಗ), ಸಯ್ಯದ್ ಮುಮ್ತಾಜ್ ಮನ್ಸೂರಿ, State President – RIIFA, Chamber of Commerce ಆಗಮಿಸಿ ಅಮೂಲ್ಯವಾದ ಭಾಷಣ ನೀಡಿದರು। ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಹುಸೇನ್, ರಕ್ಷಂದಾ ಫರೀನ್ ಸಾಹೇಬಾ ಭಟ್ಕಳ, ಮಹಿಳಾ ವಿಭಾಗದ ಅಧ್ಯಕ್ಷೆ ಸುಮ್ಮಯ್ಯ ಪರ್ವೀನ್, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷೆ ನೇಹಾ ಸಮ್ರೀನ್ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು। ಈ ಕಾರ್ಯಕ್ರಮದ ಆಯೋಜಕರಾದ ನಯೀಮ್ ಪಾಷಾ ಚೌದ್ರಿ ಅವರು ಸಂಪೂರ್ಣ ಕಾರ್ಯಕ್ರಮವನ್ನು ಅತ್ಯಂತ ಅನುಶಾಸಿತವಾಗಿ ಮತ್ತು ಸಮರ್ಪಣೆಯಿಂದ ಆಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಅತಿಥಿಗಳು “Right of Neighbour” ಬಗ್ಗೆ ಅತ್ಯಂತ ಮನಮುಟ್ಟುವ, ಆಳವಾದ ಹಾಗೂ ಉದ್ದವಾದ ಸಂದೇಶವನ್ನು ನೀಡಿದರು. ನೆರೆಹೊರೆಯವರ ಹಕ್ಕುಗಳು ಕೇವಲ ಒಬ್ಬೊಬ್ಬರ ಹೊಣೆಗಾರಿಕೆಯಾಗಿರದೇ, ಸಮಗ್ರ ಸಮಾಜದ ಶಾಂತಿ ನಿರ್ಮಾಣದಲ್ಲಿ ಪ್ರಮುಖ ಆಧಾರಶಿಲೆಯಾಗಿದೆ ಎಂದು ಅವರು ವಿಶ್ಲೇಷಿಸಿದರು. ಒಬ್ಬನು ತನ್ನ ನೆರೆಹೊರೆಯವರ ಸುರಕ್ಷತೆ, ಗೌರವ, ಸುಖ–ಸಮಾಧಾನ ಹಾಗೂ ಸಾಮಾಜಿಕ ಹಕ್ಕುಗಳನ್ನು ಕಾಪಾಡುವಾಗ, ಅದು samudaayada ನೈತಿಕ ಬಲವರ್ಧನೆಗೆ ಕಾರಣವಾಗುತ್ತದೆ ಎಂದು ವಿವರಿಸಿದರು. ನೆರೆಮನೆ ಸಂಬಂಧಗಳನ್ನು ಸುಧಾರಿಸಿದರೆ ದೇಶದ ಮಟ್ಟದಲ್ಲಿ ಸಹಬಾಳ್ವೆ, ಪರಸ್ಪರ ಗೌರವ ಮತ್ತು ಮಾನವೀಯತೆ ಬಲವಾಗುತ್ತದೆ ಎಂದು ಅರ್ಥಪೂರ್ಣವಾಗಿ ಸ್ಪಷ್ಟಪಡಿಸಿ, ಸಭಿಕರಲ್ಲಿ ದೀರ್ಘಕಾಲದ ಪ್ರೇರಣೆಯನ್ನು ಮೂಡಿಸಿದರು.

