ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಫೆ.5ರಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ವೆಂಕಟೇಶದಿನ್ನಿ ಅವರಿಂದ ನಾಟಕ, ನರಸಿಂಹ ಚಿಕ್ಕಸೂಗೂರು ಅವರಿಂದ ನಾಟಕ, ನಿರ್ಮಲ ವೇಣುಗೋಪಾಲ್ ಅವರಿಂದ ರಂಗಭೂಮಿ, ದೇವಿಂದ್ರಗೌಡ ಅವರಿಂದ ಸಮುದಾಯ ನಾಟಕ, ಎಸ್.ಎನ್. ರಘುಕುಮಾರ ಅವರಿಂದ ನಾಟಕ, ರಮೇಶ ಜಾಲಿಬೆಂಚಿ ಅವರಿಂದ ನಾಟಕ, ಬಸಮ್ಮ ರಘು ಅವರಿಂದ ಶ್ರೀಕೃಷ್ಣಪಾರಿಜಾತ ನಾಟಕ, ಮಾರೆಪ್ಪ ಜಗ್ಗಿ ರಾಯಚೂರು ಅವರಿಂದ ಜಾನಪದ ಗಾಯನ, ಅಸಾದುಲ್ಲಾ ತಲಮಾರಿ ಅವರಿಂದ ಕೋಲಾಟ, ಶಿವಕುಮಾರ ಹಿರೇಮಠ ಕಲಬುರಗಿ ಅವರಿಂದ ಸುಗಮ, ರೇಣುಕಾ ಹಾಗರಗುಂಡಗಿ ಕಲಬುರಗಿ ಅವರಿಂದ ಸುಗಮ ಸಂಗೀತ, ಮಂಜುಳಾ ರಾಯಚೂರು ಅವರಿಂದ ಸುಗಮ ಸಂಗೀತ, ವೆಂಕಟೇಶ ರಾಯಚೂರು ಅವರಿಂದ ಕ್ಲಾರಿಯೊನೆಟ್, ಹನುಮಂತ ತಾವರಗೇರಾ ಮಸ್ಕಿ ಅವರಿಂದ ನಾಟಕ, ಶೃತಿ ಕೇರೂರ ರಾಯಚೂರು ಅವರಿಂದ ವಚನ ಸಂಗೀತ, ಪಲ್ಲವಿ ಮುಜುನ್ದಾರ್ ಅವರಿಂದ ಭಾವಗೀತೆ ನಡೆಯಲಿವೆ. ನಿರೂಪಣೆಯನ್ನು ಅಣ್ಣಪ್ಪ ಮೇಟಿಗೌಡ, ಪ್ರಭಾ ಅವರು ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *