ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಫೆಬ್ರವರಿ 07ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಗರದ ಜಿಲ್ಲಾ ಕಾರಾಗೃಹ ಹತ್ತಿರದ ಮಹಿಳಾ ಸಮಾಜ ಆವರಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ.
ರಾಯಚೂರು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತಾಯರಾಜ್ ಮರ್ಚೆಟ್ಟಾಳ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿಗಳು ಹಾಗೂ ರಾಯಚೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ವೆಂಕಟೇಶ ಬೇವಿನಬೆಂಚಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಲಿಂಗಸುಗೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹದೇವಪ್ಪ ನಾಗರಾಳ, ಮಾನವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ಸಿಂಧನೂರಿನ ಕಥೆಗಾರ ಕಲಿಗಣನಾಥ ಗುಡದೂರ, ದೇವದುರ್ಗದ ಕವಿ ಶಿವರಾಜ ಬೆಟ್ಟದೂರ ಪಾಲ್ಗೊಳ್ಳುವರು.
ಭಾಗವಹಿಸುವ ಕವಿಗಳು: ಮಲ್ಲೇಶ ಭೈರವ್, ಅಯ್ಯಣ್ಣ ನಾಯಕ್ ಪಾಮನಕಲ್ಲೂರ, ಎಚ್.ಅಡವಿರಾವ್, ಶಂಕರಗೌಡ ಮಾಲೀಪಾಟೀಲ್, ಗುಂಡಪ್ಪ ರಾಠೋಡ್, ಯಲ್ಲಪ್ಪ ಎಂ.ಮರ್ಚೇಡ್, ಜಂಬನಗೌಡ ಮಾಲಿಪಾಟೀಲ್, ಎಸ್.ಶಿವಮೂರ್ತಿ, ಮೌನೇಶ ಬಿ ಬಾರಿಕೇರ, ಚನ್ನಬಸವ ದೇವದುರ್ಗ, ಸಂಗಮೇಶ್ ಗುಡಿಮನಿ, ಶರೀಫ್ ಹಸಮಕಲ್, ಬಸವರಾಜ ಮಿಟ್ಟಿ, ರವಿ ರಾಯಚೂರಕರ್, ಸುರೇಶ ಬಳಗಾನೂರ, ಲಕ್ಷ್ಮಣ ಮಂಡಲಗೇರಾ, ಅಭಿಷೇಕ ಸ್ವಾಮಿ, ಈರೇಶ ರಾಜಣ್ಣ, ಶ್ರೀಧರ ಮಸ್ಕಿ, ಹನುಮಂತರೆಡ್ಡಿ ಜವಳಗೇರಾ, ಮಹೇಶ್ ಕುಂಟೋಜಿ, ಧರೇಶ ಕುಂಟೋಜಿ, ಮಲ್ಲಿಕಾರ್ಜುನ ಸಿ., ಡಾ.ದೇವರಾಜ್ ಭಂಡಾರಿ, ಎಚ್.ಎಂ.ಶ್ರೀಶೈಲ, ಶಿವರಾಜ ದಿನ್ನಿ ಪೋತ್ನಾಳ, ಡಾ.ಪ್ರಕಾಶ ಬುದ್ದಿನ್ನಿ, ಶಂಖಸುತ ಮಹಾದೇವ, ಬಸವರಾಜ ಶೆಟ್ಟರ್, ಮುತ್ತು ವಡ್ಡರ್, ಬಿ.ಪಿ.ಕಟ್ಟಿಮನಿ, ಶರಣಬಸಪ್ಪ ಚಿಕ್ಕಬೇರಿಗಿ, ಲಕ್ಷ್ಮಣ ಭಜಂತ್ರಿ, ಶಿವರಾಜ್ ಯತಗಲ್, ಸುರೇಶ್‌ಬಾಬು ಜಂಬಲದಿನ್ನಿ, ನಾಗರಾಜ ಮಡಿವಾಳ, ದೇವರಾಜ ಜಿ.ಸಿ.ಘಂಟೆ, ಬಸವರಾಜ ನಾಯಕ, ಗೋಪಾಲ ನಾಯಕ, ಪ್ರಭು ಎಚ್.ಆರ್., ಶರಣಬಸವ ನಾಯಕ್, ಪಂಪಾಪತಿ ಕಣ್ಣೂರ, ಶಿವರಾಜ್ ಕಮಲದಿನ್ನಿ, ಶಿವಶಂಕರರಾಯ ಅಡವಿಭಾವಿ, ಡಾ.ಅಕ್ಷಯ ಕುಮಾರ, ಕವಿತಾಳ, ಎಂ.ಬಿ.ಸರಸಿಂಹಲು ವಡವಾಟಿ, ಶಿವಶಂಕರ ಕಡದಿನ್ನಿ, ವಿನೋದ್ ಕುಮಾರ ಯಾದವ್, ಸುರೇಶ್.ಜಿ., ವಿತ್ತಲ ಕೋಳೂರ, ಪೃಥ್ವಿರಾಜ್ ಎನ್., ಬಾಲರಾಜ್, ಸದಾನಂದ ಮಡಿವಾಳರ, ಯಮನೂರಪ್ಪ ಗುಡದಪ್ಪ, ಕ್ಷೀರಲಿಂಗ ಬೊಮ್ಮನಹಾಳ, ರಮೇಶ ಹಲಗಿ, ವಿಶ್ವನಾಥ ರಾಯಚೂರು, ಲಿಂಗನಗೌಡ ಪಾಟೀಲ, ರಾಜು ರಾಯಚೂರು ಭಾಗವಹಿಸಲಿದ್ದಾರೆ.
ಚನ್ನಬಸವರ ಜಾನೆಕಲ್ ಅವರು ಸ್ವಾಗತ, ರಾಯಚೂರು ಆಕಾಶವಾಣಿಯ ಅಮರೇಶ ಆಸಿಹಾಳ ಅವರು ಕಾರ್ಯಕ್ರಮ ನಿರೂಪಿಸುವರು.

Leave a Reply

Your email address will not be published. Required fields are marked *