ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ನಗರದ ಕೃಷಿ ವಿವಿಯ ವೇದಿಕೆ 03 ಬಸವೇಶ್ವರ ಸಭಾಂಗಣದಲ್ಲಿ ಫೆಬ್ರವರಿ 07ರ ಬೆಳಿಗ್ಗೆ 11ರಿಂದ ಸಂಜೆ 4ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಮಂಜೂಳ ಹಟ್ಟಿ ಅವರಿಂದ ಜಾನಪದ, ಶಂಕರಯ್ಯ ಸ್ವಾಮಿ ಮಟಮಾರಿ ಅವರಿಂದ ವಚನ ಸಂಗೀತ, ಮಲ್ಲಪ್ಪ ಮಸ್ಕಿ ಅವರಿಂದ ತತ್ವಪದ, ದೊಡ್ಡ ತಿಮ್ಮಪ್ಪ ಆರೋಲಿ ಅವರಿಂದ ಭಕ್ತಿಗೀತೆ, ಮೋನಮ್ಮ ರಾಯಚೂರು ಅವರಿಂದ ಸಂಗೀತ ಕಾರ್ಯಕ್ರಮ, ಅಂಬ್ರೇತ ನಗನೂರ ಯಾದಗಿರಿ ಅವರಿಂದ ಹಿಂದೂಸ್ಥಾನಿ ಸಂಗೀತ, ಗುರುನಾಥ ರಾಯಚೂರು ಅವರಿಂದ ಭಾವಗೀತೆಗಳು, ಅರುಣಾ ಪಾಟೀಲ ರಾಯಚೂರು ಅವರಿಂದ ಸಮೂಹ ನೃತ್ಯ, ಶಾಂತಮ್ಮ ಅವರಿಂದ ಬರ‍್ರ ಕಥೆ, ಮಾರುತಿ ಶಾಂತಪುರ ಲಿಂಗಸುಗೂರು ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಮುನಿಯಪ್ಪ ಗೋನಾಳ ಅವರಿಂದ ತತ್ವಪದ, ವಿಜಯರಾವ್, ರಾಯಚೂರು ಅವರಿಂದ ಕನ್ನಡ ಗೀತ ಗಾಯನ, ಸುಹಾನಿ ದಾದಾಪೀರ ಮಂಜರ್ಲಾ ರಾಯಚೂರು ಅವರಿಂದ ತತ್ವಪದ ಗಾಯನ, ಅಮರೇಶ ಬಿ. ರಾಯಚೂರು ಅವರಿಂದ ಜನಪದ ಸಂಗೀತ, ಜೈ ಕುಮಾರ ಮಡಿವಾಳ ಕಲಬುರಗಿ ಅವರಿಂದ ಮೂಗಿನಿಂದ ಕೊಳಲು, ಪಂಪಾಪತಿ ಹೂಗಾರ ರಾಯಚೂರು ಅವರಿಂದ ಜನಪದ ಸಂಗೀತ, ರೇಣುಕಾ ಮತ್ತು ತಂಡದಿAದ ಸಮೂಹ ಗಾಯನ, ಜಾಕೋಬ ಕುರ್ಡಿ ಅವರಿಂದ ಜನಪದ ಸಂಗೀತ, ಶಿವಕುಮಾರ ಜಿ. ಮಹಾಂತ ಅವರಿಂದ ಸುಗಮ ಸಂಗೀತ, ರಮೇಶ ರಾಂಪೂರ ರಾಯಚೂರು ಅವರಿಂದ ಸುಗಮ ಸಂಗೀತ, ಜ್ಯೋತಿ ಬೇಸ್ತವಾರಪೇಟ ರಾಯಚೂರು ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಬಸವರಾಜ ವಂದಲಿ ಮಾನವಿ ಅವರಿಂದ ಹಿಂದುಸ್ತಾನಿ ಶಾಸ್ತಿçÃಯ ಸಂಗೀತ, ಅಮರೇಶ ಪೂಜಾರಿ ವಲ್ಕಂದಿನ್ನಿ ಅವರಿಂದ ಏಕದಾರಿ ಪದ (ದಾಸವಾಣಿ), ಹಣಮಂತ ಕುಮಾರ ಅವರಿಂದ ಸುಗಮ ಸಂಗೀತ, ಮುನಿಸ್ವಾಮಿ ರಾಯಚೂರು ಅವರಿಂದ ಎಂ. ನರೇಂದ್ರ ಕುಮಾರ ರಾಯಚೂರು ಅವರಿಂದ ಭಕ್ತಿಗೀತೆ, ಶರಣಕುಮಾರ ಹೂಗಾರ ಕವಿತಾಳ ಅವರಿಂದ ತಬಲಾ ವಾದನ, ಮಹೇಶ ಬಾಬು ಸುರ್ವೆ ಕೊಪ್ಪಳ ಅವರಿಂದ ನೃತ್ಯ, ಜಯಪ್ಪ ಆಶಾಪೂರು ರಾಯಚೂರು ಅವರಿಂದ ತತ್ವಪದಗಳು, ನಾರಾಯಣ ಹಿರೆಕೋಳಚಿ ಅವರಿಂದ ಜಾನಪದ ಸಂಗೀತ, ಹುಲಿಗೆಮ್ಮ ಮತ್ತು ತಂಡದಿAದ ಸಮೂಹ ನೃತ್ಯ, ಚನ್ನಬಸವಪ್ಪ ಗೊಲ್ಲರ ಸಿಂಧನೂರು ಅವರಿಂದ ಸುಗಮ ಸಂಗೀತ, ಸಿದ್ದಲಿಂಗಪ್ಪ ಗಬ್ಬೂರು ಅವರಿಂದ ವಚನ ಗಾಯನ, ರಾಮಣ್ಣ ಗಬ್ಬೂರು ಅವರಿಂದ ವಚನ ಗಾಯನ, ಭಾಗ್ಯಶ್ರೀ ಗಿರಿಜಾಲಿ ಸಿಂಧನೂರು ಅವರಿಂದ ಭರತನಾಟ್ಯ, ಡಿ. ಚಂದ್ರಶೇಖರ ರಾಯಚೂರು ಅವರಿಂದ ಭರತನಾಟ್ಯ, ಚನ್ನಪ್ಪ ಜಡೆಪ್ಪ ಗಲಗ ಅವರಿಂದ ಭರತನಾಟ್ಯ, ಕಲ್ಲನಗೌಡ ವೆಂಕಟಾಪೂರು ಅವರಿಂದ ತತ್ವಪದ, ಗುರುರಾಜ ಕುಲಕರ್ಣಿ ರಾಯಚೂರು ಅವರಿಂದ ದಾಸವಾಣಿ, ವಾಣಿಶ್ರೀ ರಾಯಚೂರು ಅವರಿಂದ ಸಮೂಹ ದಾಸವಾಣಿ, ಆದಿತ್ಯ ನಾಯಕ ರಾಯಚೂರು ಅವರಿಂದ ಸುಗಮ ಸಂಗೀತ, ಸಮೀರಣ ಜೋಷಿ ರಾಯಚೂರು ಅವರಿಂದ ಭರತನಾಟ್ಯ, ಹನುಮಯ್ಯ ಪಿಲಿಗುಂಡಿ ಅವರಿಂದ ಹಿಂದುಸ್ತಾನಿ ಸಂಗೀತ, ಶ್ರೀಧರ ದೇಸಾಯಿ ಮಾನವಿ ಅವರಿಂದ ಜನಪದ ಸಮೂಹ ಗಾಯನ, ಸಣ್ಣಬೂದೆಪ್ಪ ಆಶಾಪೂರ ಅವರಿಂದ ಸುಗಮ ಸಂಗೀತ, ಲತಾ ಹೂಗಾರ ಅವರಿಂದ ಜನಪದ, ಶರಣಬಸವ ತಾತ ರಾಂಪುರ್ ಅವರಿಂದ ಜನಪದ ಗಾಯನ ನಡೆಯಲಿವೆ.
ಸಂಗನೌಡ ರಾಯಚೂರು ಹಾಗೂ ಮಂಜುನಾಥ ರಾಯಚೂರು ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *