ರಾಯಚೂರು: ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ (ಕಲಬುರಗಿ ಪೀಠ) ಶ್ರೀ ಬಿ. ವೆಂಕಟ ಸಿಂಗ್ ಅವರು ಫೆಬ್ರವರಿ 6 ಮತ್ತು 7, 2026 ರಂದು ರಾಯಚೂರು ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಪ್ರವಾಸದ ವಿವರಗಳು ಈ ಕೆಳಗಿನಂತಿವೆ:
ಪ್ರವಾಸದ ವೇಳಾಪಟ್ಟಿ:
ಫೆಬ್ರವರಿ 06, 2026 (ಶುಕ್ರವಾರ):
ಮಧ್ಯಾಹ್ನ 2:00 ಗಂಟೆಗೆ ಕಲಬುರಗಿಯಿಂದ ಹೊರಟು, ಸಂಜೆ 6:00 ಗಂಟೆಗೆ ರಾಯಚೂರಿಗೆ ತಲುಪಲಿದ್ದಾರೆ.
ರಾಯಚೂರು ಜಿಲ್ಲೆಯ ಕೃಷಿ ಮೇಳ ಮತ್ತು ಎಡದೊರೆ ನಾಡು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಂದು ರಾಯಚೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಫೆಬ್ರವರಿ 07, 2026 (ಶನಿವಾರ):
ಸಂಜೆ 4:00 ಗಂಟೆಗೆ ರಾಯಚೂರು ಜಿಲ್ಲಾ ಉತ್ಸವದಲ್ಲಿ ಸಂವಾದ ಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾಯ್ದೆಯ (RTI) ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಿದ್ದಾರೆ.
ನಂತರ ರಾತ್ರಿ 7:00 ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ, ರಾತ್ರಿ 10:00 ಗಂಟೆಗೆ ಕಲಬುರಗಿ ಕೇಂದ್ರ ಸ್ಥಾನಕ್ಕೆ ಮರಳಲಿದ್ದಾರೆ.
ಈ ಪ್ರವಾಸದ ಕುರಿತು ಮಾಹಿತಿ ನೀಡಲು ಮಾನ್ಯ ರಾಜ್ಯ ಮಾಹಿತಿ ಆಯುಕ್ತರಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *