ಹಾಲಾಪೂರ ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಹಾಲಾಪೂರ ಗ್ರಾಮ ಪಂಚಾಯಿತಿಗೆ ಹನುಮಂತಪ್ಪ ಭಜಂತ್ರಿ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಮಾನ್ವಿ ಇವರು ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ ಪಂಚಾಯತಿಯಲ್ಲಿ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ಪಾಲಿಸಬೇಕು, ಸರಿಯಾದ ಸಮಯ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸಿ ತತಕ್ಷಣ ಪರಿಹರಿಸುವ ಕೆಲಸ ಮಾಡಬೇಕು, ಇನ್ನೇನು ಬೇಸಿಗೆ ಸಮೀಪಿಸಿದ್ದು ಕುಡಿಯುವ ನೀರಿನ ಪೂರೈಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿ, ಕ್ಯಾಂಪ್ ಗಳಿಗೆ ಸರಿಯಾಗಿ ಪೂರೈಕೆ ಮಾಡುವ ಮೂಲಕ ಸಿಬ್ಬಂದಿಗಳು ಕೆಲಸ ಮಾಡಬೇಕೆಂದು ಹೇಳಿದರು. ನಂತರ ಪಿಡಿಒ ವಿಶ್ವನಾಥ ಹೂಗಾರ ಮಾತನಾಡಿ ನೂತನ ಆಡಳಿತ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ನಮ್ಮ ಎಲ್ಲಾ ಸಿಬ್ಬಂದಿಗಳ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ಮಟ್ಟದ ಎಲ್ಲಾ ಹಳ್ಳಿಗಳ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕೆಲಸ ಮಾಡಲಾಗುವುದು ಎಂದು ಪಿಡಿಒ ವಿಶ್ವನಾಥ ಹೂಗಾರ ಹೇಳಿದರು. ಈ ವೇಳೆಯಲ್ಲಿ ಕಾರ್ಯದರ್ಶಿ ಪರಣ್ಣ ಪಾಮನಕಲ್ಲೂರು, ರಂಗಪ್ಪ ಕಂಪ್ಯೂಟರ್ ಆಪರೇಟರ, ಗ್ಯಾನಪ್ಪ ಗ್ರಂಥಪಾಲಕ, ಶ್ರೀದೇವಿ, ಮೌಲಸಾಬ ಹಾಗೂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *