ಮಸ್ಕಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನರೇಗಾ ಯೋಜನೆಯ ಹೆಸರಿನಲ್ಲಿ ಬದಲಾ ವಣೆ ಮಾಡುವುದರ ಮೂಲಕ ಮಹಾತ್ಮಾ ಗಾಂಧಿಯವರ ಹೆಸರನ್ನು ನಿಧಾನವಾಗಿ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮಸ್ಕಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ ಆರೋಪಿಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಹಾಗೂ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಟ್ಟಣದ ಗಾಂಧಿನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಮನ್ ರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೇಲ್ ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿನಗಳ ಉದ್ಯೋಗ ಲಭಿಸಬೇಕು ಎನ್ನುವ ಉದ್ಧೇಶದಿಂದ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದನ್ನು ಹಂತಹಂತವಾಗಿ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರಕಾರ ಹೊಂದಿದೆ.ಇಷ್ಟೊಂದು ಒಳ್ಳೆಯ ಯೋಜನೆಯನ್ನು ಮಹಾತ್ಮಗಾಂಧಿ ಯೋಜನೆಗೆ ರಾಮ ಹೆಸರು ಇಡುವ ಬದಲು ರಾಮನ ಹೆಸರಿನಲ್ಲೆ ಹೊಸತಾದ ಯೋಜನೆಯನ್ನು ಪ್ರತಿಯೊಬ್ಬರೂ ಒಪ್ಪುತ್ತಿದ್ದೇವು ಎಂದರು.

ಪ್ರತಿಭಟನೆಗೆ ಮುನ್ನ ಪಟ್ಟಣದ ಗಾಂಧಿನಗರದ ಅಂಬೇಡ್ಕರ್ ವೃತ್ತ ಮುಂಭಾಗದಿಂದ ಅಶೋಕ ವೃತ್ತ ಮಾರ್ಗವಾಗಿ ಹೊರಟು ಹಳೆ ಬಸ್ ನಿಲ್ದಾಣದ ತನಕ ಪಾದಯಾತ್ರೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಅಂದಾನಪ್ಪ ಗುಂಡಳ್ಳಿ, ವೆಂಕಟರೆಡ್ಡಿ ಗೌಡ ಹಾಲಾಪೂರ,
ಹನುಮೇಶ ಬಾಗೋಡಿ,ಮಲ್ಲಯ್ಯ ಬಳ್ಳ,ಹನುಮಂತಪ್ಪ ಮುದ್ದಾಪುರ,
ಮಹಿಬೂಬ ಸಾಬ್ ಮುದ್ದಾಪುರ, ಹಾಗೂ ಕಾಂಗ್ರೆಸ್ ಮುಖಂಡರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *