ಕಾಲೇಜು ವಿದ್ಯಾರ್ಥಿನಿ ರೈಲ್ವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂಧನೂರು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಗರದ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಬಿಎ ಅಭ್ಯಾಸ ಮಾಡುವ ವಿದ್ಯಾರ್ಥಿನಿ ಸುಮಂಗಲಾ ನಗರದ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ವಸತಿ ಪಡೆದಿದ್ದಳು.
ನನ್ನ ಆತ್ಮಹತ್ಯೆಗೆ ಯಾರು ಕಾರಣರಲ್ಲ ನಾನೇ ಕಾರಣ ಎಂದು ಸಾಯುವುದಕ್ಕೂ ಮುಂಚೆ ಆಡಿಯೋ ಮಾಡಿ ಅವರ ಕುಟುಂಬದವರಿಗೆ ವಾಟ್ಸಪ್ ಮಾಡಿದ್ದಾಳೆ. ಫೆ.3ರಂದು ಸಂಜೆ 5ಕ್ಕೆ ಬೆಂಗಳೂರಿಗೆ ಹೊರಡುವ ರೈಲ್ವೆಗೆ ಬಿದ್ದು, ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿ ಮಾನ್ವಿ ತಾಲೂಕಿನ ಸೀಕಲ್ ತಾಂಡದ ಸುಮಂಗಲಾ ತಂದೆ ಗೋಪಾಲ ಲಂಬಾಣಿ 21 ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ
ಚಂದ್ರಶೇಖರ ಜಿ, ನಗರ ಪೋಲೀಸ್ ಠಾಣೆಯ ವೀರಾರೆಡ್ಡಿ, ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ನಂತರ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ದಾಖಲು ಮಾಡಿದರು.
ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ವಿದ್ಯಾರ್ಥಿನಿ ಆಡಿಯೋ ಮಾಡಿದ್ದು, ತನಿಖೆಯ ನಂತರವಷ್ಟೆ ಕಾರಣ ಗೊತ್ತಾಗಲಿದೆ. ಸಿಂಧನೂರು ಸಹಾಯಕ ನಿರ್ದೇಶಕರು ಗ್ರೇಡ್ 1 ಸಮಾಜ ಕಲ್ಯಾಣ ಇಲಾಖೆ ವೆಂಕಟೇಶ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಾರಣ ಕೇಳಿ ಡಾ.ಬಿ.ಆರ್ ಅಂಬೇಡ್ಕರ ವಸತಿ ನಿಲಯ ವಾರ್ಡನ್ ಗೆ ನೋಟಿಸ್ ನೀಡಲಾಗಿದೆ ಎಂದು ವೆಂಕಟೇಶ ಪತ್ರಿಕೆಗೆ ಮಾಹಿತಿ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಪದವಿ ವಸತಿ ನಿಲಯ ಸಮಾಜ ಕಲ್ಯಾಣ ಇಲಾಖೆ ವಾಸವಿದ್ದ ವಿದ್ಯಾರ್ಥಿನಿ ಸುಮಂಗಲಾ ಬಿಎ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು, ಸೆಮಿಸ್ಟರ್ ಪರೀಕ್ಷೆ ಬರೆದು ವಸತಿ ನಿಲಯಕ್ಕೆ ಬಾರದೆ ಮನೆಗೆ ತೆರಳಿದ್ದಾಳೆ ಎಂದು ವಸತಿ ನಿಲಯದಲ್ಲಿರುವ ಸಹದ್ಯೋಗಿ ಇತರೆ ವಿದ್ಯಾರ್ಥಿಗಳಿಂದ ತಿಳಿದು ಬಂದಿದೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ, ತಾಲೂಕು ಅಧಿಕಾರಿಗಳು ವರದಿ ನೀಡಿದ್ದು, ವಸತಿ ನಿಲಯ ನಿಯಮಗಳನ್ನು ವಾರ್ಡನ್ ಉಲ್ಲಂಘಿಸಿದ್ದು ಕಂಡು ಬಂದರೆ ನಮ್ಮ ಮೇಲಧಿಕಾರಿಗಳ ಆದೇಶ ಮೇರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು ಹೇಳಿದರು.

