ಬಳಗಾನೂರು ಪಟ್ಟಣದ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಮುಂದೆ ರಾಯಚೂರು ಉತ್ಸವದ ರಥವು ಆಗಮಿಸಿದ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ, ಪುಷ್ಪಮಾಲೆ ಹಾಕಿ ಗೌರವಿಸಲಾಯಿತು. ಈ ವೇಳೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ಪ್ರಭಾತ್ ಪೇರಿಯ ಮೂಲಕ ರಥವನ್ನು ಮುಂದಕ್ಕೆ ಬೀಳ್ಕೊಟ್ಟು ಸಂಭ್ರಮಿಸಿದರು.
ರಥದ ಆಗಮನದಿಂದ ಪಟ್ಟಣದಲ್ಲಿ ಭಕ್ತಿ, ಸಂಭ್ರಮ ಮತ್ತು ಉತ್ಸವದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಘೋಷಣೆಗಳನ್ನು ಕೂಗಿ, ಉತ್ಸವದ ಮಹತ್ವವನ್ನು ಸಾರಿದರು. ಸ್ಥಳೀಯ ಗಣ್ಯರು, ಪಾಲಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಉತ್ಸವದ ಯಶಸ್ಸಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಅಮರನಾಥ್ ಹಳ್ಳೂರ್ , ಶಿಕ್ಷಕರಾದ , ಶ್ರೀಮಲ್ಲಿಕಾರ್ಜುನ ಬೈರೆ ಶಿಕ್ಷಕರು, ಶ್ರೀಮತಿ ಬೌರಮ್ಮ, ಶ್ರೀಸೋಮಶೇಖರ, ಶ್ರೀವೆಂಕಟೇಶ, ಶ್ರೀಮಲ್ಲಿಕಾರ್ಜುನ್ ಜಾಲ್ವಾಡಿಗಿ,,, ಶ್ರೀಸಿದ್ದರಾಯ ಸರ್,ಶ್ರೀಸಂಗಪ್ಪ ಸರ್, ಶ್ರೀಬಸವರಾಜ ಯಾದಗಿರಿ ಸರ್, ಶ್ರೀಬಾಸ್ಕರ್ ಹೆಂಬ ಸರ್, ಕು!! ಪ್ರಿಯಾ0ಕಾ,ಶ್ರೀ md ಪೈಮುದ್ದಿನ್, ಶ್ರೀಕರಿಯಪ್ಪ.ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಉತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದರು. ರಾಯಚೂರು ಉತ್ಸವವು ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ಏಕತೆಯ ಸಂಕೇತವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

